ನವದೆಹಲಿ: ಭಾರತೀಯ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳು ಲೆಫ್ಟಿನೆಂಟ್ ಸಿಡಿಆರ್ ರೂಪ ಎ. ಮತ್ತು ಲೆಫ್ಟಿನೆಂಟ್ ಸಿಡಿಆರ್ ದಿಲ್ನಾ ಕೆ. ಎಂಟು ತಿಂಗಳ ಕಾಲ ವಿಶ್ವವನ್ನು ಸುತ್ತುವ ಸವಾಲಿನ ಕಾರ್ಯಾಚರಣೆ ‘ನಾವಿಕ ಸಾಗರ್ ಪರಿಕ್ರಮ’ವನ್ನು ಬುಧವಾರ ಗೋವಾದಿಂದ ಆರಂಭಿಸಿದ್ದಾರೆ.
ಭಾರತೀಯ ನೌಕಾಯಾನ ನೌಕೆ (ಐಎನ್ಎಸ್ವಿ) ‘ತಾರಿಣಿ’ ಯಲ್ಲಿ ಇಬ್ಬರೂ ಅಧಿಕಾರಿಗಳು ಪ್ರಯಾಣ ಬೆಳೆಸಿದ್ದಾರೆ. ‘ನಾವಿಕ ಸಾಗರ್ ಪರಿಕ್ರಮ’ ದಂಡಯಾತ್ರೆಯನ್ನು ಪಣಜಿ ಬಳಿಯ ನೌಕಾ ಸಾಗರ ನೌಕಾಯಾನ ನೋಡ್, ಐಎನ್ಎಸ್ ಮಾಂಡೋವಿಯಿಂದ ಫ್ಲ್ಯಾಗ್ ಆಫ್ ಮಾಡಲಾಯಿತು.
ನೌಕಾಪಡೆಯ ಮುಖ್ಯಸ್ಥ (ಸಿಎನ್ಎಸ್) ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಮಾತನಾಡಿ, “ನಮ್ಮ ರಾಷ್ಟ್ರವು ಮತ್ತೊಮ್ಮೆ ‘ವಿಕಸಿತ ಭಾರತ’ ಆಗಿ ಪರಿವರ್ತನೆಯಾಗುವ ಪ್ರಯಾಣವನ್ನು ಸಮುದ್ರಕ್ಕೂ ಕೊಂಡೊಯ್ಯುವ ಸಮಯ ಇದಾಗಿದ್ದು, ನಾವಿಕ ಸಾಗರ್ ಪರಿಕ್ರಮದ ಈ ಆವೃತ್ತಿಯು ‘ಸಶಕ್ತ’ ಮತ್ತು ‘ಸಕ್ಷಮ ಭಾರತದʼದ ಅದಮ್ಯ ಚೈತನ್ಯವನ್ನು ಸಾಕಾರಗೊಳಿಸುತ್ತದೆ. ಈ ಸವಾಲಿನ ಪ್ರಯತ್ನವು ನಮ್ಮ ರಾಷ್ಟ್ರದ ಪಿತನಿಗೆ ಸೂಕ್ತವಾದ ಗೌರವವಾಗಿದೆ, ಗಾಂಧೀಜಿ ಅವರ ಜೀವನವು ಆತ್ಮ ವಿಶ್ವಾಸ ಮತ್ತು ಸ್ವಾವಲಂಬನೆಯ ಮೇಲೆ ನಿರ್ಮಿಸಲಾದ ಸ್ಥಿತಿಸ್ಥಾಪಕತ್ವ, ಪರಿಶ್ರಮ ಮತ್ತು ಅಚಲವಾದ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಇಂದೇ ಈ ಪರ್ಯಟನೆ ಆರಂಭವಾಗಿರುವುದು ಮಹತ್ವದ ಸಂಗತೊಯಾಗಿದೆ” ಎಂದು ಹೇಳಿದರು.
ಇಬ್ಬರು ಮಹಿಳಾ ಅಧಿಕಾರಿಗಳು ಸಾಗರ್ ಪರಿಕ್ರಮ ಕಾರ್ಯಾಚರಣೆಗಾಗಿ ನೌಕಾಪಡೆಯ ತಾರಿಣಿಯಲ್ಲಿ ಪರ್ಯಟನೆ ನಡೆಸಲಿದ್ದಾರೆ. ಪರ್ಯಟನೆ ಪೂರ್ಣಗೊಳ್ಳಲು ಎಂಟು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಮೇ 2025 ರ ವೇಳೆಗೆ ಭಾರತಕ್ಕೆ ಹಿಂತಿರುಗಲಿದ್ದಾರೆ. ಈ ಪ್ರಯಾಣದಲ್ಲಿ ಅವರು ಸುಮಾರು 40,000 ಕಿ.ಮೀ ಕ್ರಮಿಸಲಿದ್ದಾರೆ.
Admiral Dinesh K Tripathi, Chief of the Naval Staff flagged off the Navika Sagar Parikrama II expedition from Ocean Sailing Node, INS Mandovi, Goa, today
Two Women Naval Officers Lt Cdr Dilna K and Lt Cdr Roopa A embark on the voyage of circumnavigation of the globe onboard… pic.twitter.com/FYhycKjWrc
— ANI (@ANI) October 2, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.