ತಿರುಪತಿ: ತಿರುಪತಿ ಲಡ್ಡು ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸೆಪ್ಟೆಂಬರ್ 28 ರಂದು ತಿರುಪತಿಗೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ತಿರುಮಲ ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಜಗನ್ ತಮ್ಮ ಧರ್ಮವನ್ನು ಘೋಷಿಸಬೇಕು ಎಂದು ಒತ್ತಾಯಿಸಿದೆ.
ರೆಡ್ಡಿ ಆಳ್ವಿಕೆಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿತ್ತು ಎಂಬ ಗಂಭೀರವಾದ ಆರೋಪ ಇದೆ. ಲ್ಯಾಬ ವರದಿಗಳನ್ನು ಉಲ್ಲೇಖಿಸಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರೇ ಈ ಆರೋಪಗಳನ್ನು ಮಾಡಿದ್ದಾರೆ. ಆದರೆ ಜಗನ್ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ತಿರುಪತಿಗೆ ಭೇಟಿ ನೀಡಿ ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಆಂಧ್ರಪ್ರದೇಶದ ಕಂದಾಯ ದತ್ತಿ ನಿಯಮ 16 ಮತ್ತು ಟಿಟಿಡಿ ಸಾಮಾನ್ಯ ನಿಯಮಾವಳಿ ನಿಯಮ 136ರ ಪ್ರಕಾರ ಹಿಂದೂಯೇತರರು ವೈಕುಂಠಂ ಸರತಿ ಸಾಲಿನಲ್ಲಿ ದರ್ಶನಕ್ಕೆ ಮುನ್ನ ಘೋಷಣೆ ಸಲ್ಲಿಸಬೇಕು ಎಂದು ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ ತಿಳಿಸಿದ್ದಾರೆ.
ಬಿಜೆಪಿ ನಾಯಕ ಜಗನ್ ರೆಡ್ಡಿ ಅವರು ತಿರುಮಲ ದರ್ಶನವನ್ನು ಪ್ರಾರಂಭಿಸುವ ಮೊದಲು ಅಲಿಪಿರಿಯ ಗರುಡ ಪ್ರತಿಮೆಯಲ್ಲಿಯೇ ಘೋಷಣೆಯನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
“ಜಗನ್ ಮೋಹನ್ ರೆಡ್ಡಿ ಅವರು ಈ ತಿಂಗಳ 28 ರಂದು ತಿರುಮಲಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿದ್ದಾರೆ. ಒಬ್ಬರ ನಂಬಿಕೆಯನ್ನು ಘೋಷಿಸುವ ಅಭ್ಯಾಸವು ತಿರುಮಲದಲ್ಲಿ ದಶಕಗಳಿಂದ ಚಾಲ್ತಿಯಲ್ಲಿದೆ. ಎಪಿ ಕಂದಾಯ ದತ್ತಿಗಳ G.O. MS NO- 311 ರ ಪ್ರಕಾರ –1 , ನಿಯಮ ಸಂಖ್ಯೆ 16, ಹಿಂದೂಗಳಲ್ಲದವರು ವೈಕುಂಟಂ ಕ್ಯೂ ಕಾಂಪ್ಲೆಕ್ಸ್ನಲ್ಲಿ ದೇವರಲ್ಲಿ ನನಗೆ ನಂಬಿಕೆ ಇದೆ ಎಂದು ದರ್ಶನಕ್ಕೆ ಮುಂಚಿತವಾಗಿ ಘೋಷಣೆಯನ್ನು ನೀಡಬೇಕು ಇದು TTD ಸಾಮಾನ್ಯ ನಿಯಮಾವಳಿಯ ನಿಯಮ 136 ರ ಪ್ರಕಾರ ಅವಶ್ಯಕ ಆಗಿದೆ. ಜಗನ್ ರೆಡ್ಡಿ ಅವರು ತಿರುಮಲವನ್ನು ಪ್ರವೇಶಿಸುವ ಮೊದಲು ಅವರು ಘೋಷಣೆಯನ್ನು ನೀಡಬೇಕು. ಅಲಿಪಿರಿಯಲ್ಲಿರುವ ಗರುಡ ಪ್ರತಿಮೆಯ ಮೇಲೆ ಅವರ ನಂಬಿಕೆಯನ್ನು ಪುನರುಚ್ಛರಿಸಬೇಕು” ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.