ಮಲಬಾರ್: ವಕ್ಫ್ (ತಿದ್ದುಪಡಿ) ಮಸೂದೆಯನ್ನು ಕೇರಳದ ಸಿರೋ-ಮಲಬಾರ್ ಚರ್ಚ್ ಬೆಂಬಲಿಸಿದ್ದು, ವಕ್ಪ್ ಬೋರ್ಡ್ ಉಪಟಳದಿಂದ ಕ್ರೈಸ್ಥರು ಅನುಭವಿಸುತ್ತಿರುವ ಆಸ್ತಿ ವಿವಾದದ ಬಗ್ಗೆ ಪತ್ರ ಬರೆದಿದೆ.
ಸಿರೋ-ಮಲಬಾರ್ ಸಾರ್ವಜನಿಕ ವ್ಯವಹಾರಗಳ ಆಯೋಗದ ಅಧ್ಯಕ್ಷರಾಗಿರುವ ಆರ್ಚ್ಬಿಷಪ್ ಆಂಡ್ರ್ಯೂಸ್ ಥಾಜತ್ ಅವರು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ), ಸುದೀರ್ಘ ಕಾನೂನು ವಿವಾದಗಳು ಮತ್ತು ಸರಿಯಾದ ಮಾಲೀಕರ ಬದಲಾವಣೆಯನ್ನು ಉಲ್ಲೇಖಿಸಿ ಪತ್ರ ಬರೆದಿದೆ. ಸೆಪ್ಟೆಂಬರ್ 10 ರಂದು ಬರೆದ ಪತ್ರದಲ್ಲಿ ಕೇರಳದ ಆಸ್ತಿ ವಿವಾದಗಳನ್ನು ಉಲ್ಲೇಖಿಸಿದ್ದು, 1995ರ ವಕ್ಫ್ ಕಾಯ್ದೆಯಿಂದಾಗಿ ಕ್ರೈಸ್ತ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಎರ್ನಾಕುಲಂ ಜಿಲ್ಲೆಯ ಚೆರೈ ಮತ್ತು ಮುನಂಬಂ ಗ್ರಾಮಗಳಲ್ಲಿ ತಲೆಮಾರುಗಳಿಂದ ಕ್ರಿಶ್ಚಿಯನ್ ಕುಟುಂಬಗಳ ಒಡೆತನದ ಹಲವಾರು ಆಸ್ತಿಗಳನ್ನು ವಕ್ಫ್ ಮಂಡಳಿಯು ತಪ್ಪಾಗಿ ಕ್ಲೈಮ್ ಮಾಡಿದೆ ಎಂದು ಆರ್ಚ್ಬಿಷಪ್ ಆರೋಪಿಸಿದ್ದಾರೆ.
ಸುಮಾರು 600 ಕುಟುಂಬಗಳು ಈ ಬೆದರಿಕೆಯನ್ನು ಎದುರಿಸುತ್ತಿವೆ ಎಂದು ಹೇಳಲಾಗಿದೆ. “ಈ ಕುಟುಂಬಗಳು ಬಡ ಮೀನುಗಾರ ಸಮುದಾಯಕ್ಕೆ ಸೇರಿವೆ. ಕ್ಯಾಥೋಲಿಕ್ ಪ್ಯಾರಿಷ್ ಚರ್ಚ್, ಕಾನ್ವೆಂಟ್ ಮತ್ತು ಡಿಸ್ಪೆನ್ಸರಿ ಕೂಡ ವಕ್ಫ್ ಮಂಡಳಿಯಿಂದ ನಿರ್ಗತಿಕರಾಗುವ ಅಪಾಯದಲ್ಲಿದೆ” ಎಂದಿದ್ದಾರೆ.
1995 ರ ವಕ್ಫ್ ಕಾಯಿದೆಯು ವಕ್ಫ್ ಮಂಡಳಿಗೆ ಯಾವುದೇ ಆಸ್ತಿಯ ಮೇಲೆ ಸುಲಭವಾಗಿ ಹಕ್ಕು ಸಾಧಿಸಲು ಅನುವು ಮಾಡಿಕೊಡುತ್ತದೆ. ಹೀಗಾಗಿ ನರೇಂದ್ರ ಮೋದಿ ಸರ್ಕಾರವು ವಕ್ಫ್ ಮಂಡಳಿಯ ಕಾರ್ಯನಿರ್ವಹಣೆಯನ್ನು ಹೆಚ್ಚು ಪಾರದರ್ಶಕವಾಗಿಸುವ ತಿದ್ದುಪಡಿಯನ್ನು ತರಲು ಯೋಜಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.