ನವದೆಹಲಿ: ಮೆಹೂಬಾ ಮುಫ್ತಿ ಅವರ ಪಿಡಿಪಿ, ಫಾರೂಕ್ ಅಬ್ದುಲ್ಲಾ ಅವರ ಎನ್ಸಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬಿರುಸಿನ ವಾಗ್ದಾಳಿ ನಡೆಸಿದ್ದು, ಮೂರು ಕುಟುಂಬ ರಾಜಕೀಯದ ಪಕ್ಷಗಳು ಜಮ್ಮು ಮತ್ತು ಕಾಶ್ಮೀರದ ಯುವಕರ ಕೈಗೆ ಶಸ್ತ್ರಾಸ್ತ್ರ ನೀಡಿದರೆ, ಬಿಜೆಪಿ ಲ್ಯಾಪ್ಟಾಪ್ಗಳನ್ನು ಹಸ್ತಾಂತರಿಸಿದೆ ಎಂದು ಹೇಳಿದ್ದಾರೆ.
ಚುನಾವಣಾ ಕಣದಲ್ಲಿರುವ ಜಮ್ಮು-ಕಾಶ್ಮೀರದ ಮೆಂಧಾರ್ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕಣಿವೆಯು ಅಭೂತಪೂರ್ವ ಪರಿವರ್ತನೆಗೆ ಸಾಕ್ಷಿಯಾಗಿದೆ. ಭಯೋತ್ಪಾದನೆಯಿಂದ ಶಾಂತಿಯತ್ತ ಸಾಗುತ್ತಿದೆ ಎಂದರು.
“ಜಮ್ಮು ಮತ್ತು ಕಾಶ್ಮೀರದ ಪ್ರಜಾಪ್ರಭುತ್ವವನ್ನು ಅಬ್ದುಲ್ಲಾ, ಮುಫ್ತಿ ಮತ್ತು ನೆಹರು-ಗಾಂಧಿ ಎಂಬ ಮೂರು ಪ್ರಭಾವಿ ಕುಟುಂಬಗಳು ಒತ್ತೆಯಾಳಾಗಿ ಇರಿಸಿದ್ದವು. ಆದರೆ, 2014 ರ ಮೋದಿ ಸರ್ಕಾರವು ತಳಮಟ್ಟದ ಪ್ರಜಾಪ್ರಭುತ್ವಕ್ಕೆ ದಾರಿ ಮಾಡಿಕೊಟ್ಟಿದೆ, ಪಂಚಾಯತ್, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಚುನಾವಣೆಗಳನ್ನು ಖಾತ್ರಿಪಡಿಸಿದೆ” ಎಂದರು.
ಈಗ ಪಾಕಿಸ್ಥಾನ ಪ್ರಧಾನಿ ಮೋದಿಗೆ ಹೆದರಿದಂತೆ ಹಿಂದೆ ಪ್ರಾದೇಶಿಕ ನಾಯಕರು ಪಾಕಿಸ್ತಾನಕ್ಕೆ ಹೆದರುತ್ತಿದ್ದರು. ಪದೇ ಪದೇ ಗುಂಡಿನ ದಾಳಿ ನಡೆಯುತ್ತಿದ್ದ ದಿನಗಳು ಕಳೆದುಹೋಗಿವೆ ಎಂದು ಶಾ ಹೇಳಿದರು.
“ಮೋದಿ ಅವರ ಅವಿರತ ಪ್ರಯತ್ನದಿಂದಾಗಿ, ಇಂದು ಸುಮಾರು 30,000 ಕಾಶ್ಮೀರಿ ಯುವಕರು ವಿವಿಧ ಹಂತಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ, ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ” ಎಂದು ಶಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.