ನವದೆಹಲಿ: ಸೆಪ್ಟೆಂಬರ್ 21 ರಿಂದ 23 ರವರೆಗೆ ನಡೆಯಲಿರುವ 4 ನೇ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ನವೆಂಬರ್ನಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್-ಹ್ಯಾರಿಸ್ ಪ್ರಚಾರದ ವೇಗವನ್ನು ಪಡೆಯುತ್ತಿರುವ ನಡುವೆ ಈ ಭೇಟಿ ನಡೆಯಲಿದೆ.
ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಟ್ರಂಪ್ ಮಿಚಿಗನ್ನಲ್ಲಿ ಪ್ರಚಾರ ಮಾಡುವಾಗ ಮುಂದಿನ ವಾರ ಮೋದಿಯನ್ನು ಭೇಟಿ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಪ್ರಧಾನಿ ಮೋದಿ ಒಬ್ಬ “ಅದ್ಭುತ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ.
ಮಂಗಳವಾರ ವಿದೇಶಾಂಗ ಸಚಿವಾಲಯವು ಪ್ರಧಾನಿ ಮೋದಿಯವರ ಯುಎಸ್ ಭೇಟಿಯ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿದೆ, ಆದರೆ ಅದರಲ್ಲಿ ಟ್ರಂಪ್-ಮೋದಿ ಭೇಟಿಯ ಬಗ್ಗೆ ಉಲ್ಲೇಖ ಮಾಡಿಲ್ಲ. ಆದರೆ ಭಾರತ-ಯುಎಸ್ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚಿಂತನೆಯುಳ್ಳ ಈ ಇಬ್ಬರು ನಾಯಕರು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೇ ಮೋದಿ ಇತರ ಪ್ರಮುಖ ಪಾಲುದಾರರೊಂದಿಗೆ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ.
2019 ರಲ್ಲಿ ಪ್ರಧಾನಿ ಮೋದಿಯವರ ಯುಎಸ್ ಭೇಟಿಯ ಸಮಯದಲ್ಲಿ, “ಹೌಡಿ, ಮೋದಿ!” ಕಾರ್ಯಕ್ರಮದಲ್ಲಿ ಮೋದಿ ಮತ್ತು ಟ್ರಂಪ್ ಪರಸ್ಪರ ಪ್ರಶಂಸೆ ವಿನಿಮಯ ಮಾಡಿಕೊಂಡರು. ಟೆಕ್ಸಾಸ್ನಲ್ಲಿ ನಡೆದ ರ್ಯಾಲಿಯಲ್ಲಿ ಸುಮಾರು 50,000 ಜನರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.