ವಾಷಿಂಗ್ಟನ್: ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಗಮನಹರಿಸಿರುವ ಭಾರತಕ್ಕೆ “ಎ” ಗ್ರೇಡ್ ನೀಡುವುದಾಗಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಬಿಲಿಯನೇರ್ ಬಿಲ್ ಗೇಟ್ಸ್ ಹೇಳಿದ್ದಾರೆ.
“ಆದಾಯದ ಮಟ್ಟದಿಂದಾಗಿ ಪೌಷ್ಟಿಕಾಂಶದ ಕೆಲವು ಸೂಚಕಗಳು ತಾನು ಬಯಸುವುದಕ್ಕಿಂತ ದುರ್ಬಲವಾಗಿವೆ ಎಂದು ಭಾರತವು ಒಪ್ಪಿಕೊಳ್ಳುತ್ತದೆ. ಆ ರೀತಿಯ ನಿಷ್ಕಪಟತೆ ಮತ್ತು ಗಮನ ಕೇಂದ್ರೀಕರಿಸುವಿಕೆ ತುಂಬಾ ಪ್ರಭಾವಶಾಲಿಯಾದ ಅಂಶ ಎಂದು ನಾನು ಭಾವಿಸುತ್ತೇನೆ” ಎಂದು ಗೇಟ್ಸ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇತರ ಯಾವುದೇ ಸರ್ಕಾರಗಳಿಗಿಂತ ಭಾರತವು ಪೌಷ್ಟಿಕಾಂಶದ ವಿಷಯದ ಮೇಲೆ ಹೆಚ್ಚು ಗಮನಹರಿಸಿದೆ ಎಂದು ಅವರು ಹೇಳಿದ್ದಾರೆ.
“ಭಾರತ ಸಾರ್ವಜನಿಕ ಆಹಾರ ವ್ಯವಸ್ಥೆ ಮತ್ತು ಮಧ್ಯಾಹ್ನದ ಊಟ ವ್ಯವಸ್ಥೆಯನ್ನು ಬಳಸುತ್ತಿದೆ ಮತ್ತು ಬಲವರ್ಧಿತ ಆಹಾರವನ್ನು ನೀಡಲು ಪ್ರಯತ್ನಿಸುತ್ತಿದೆ, ಇದು ನಿಜಕ್ಕೂ ದೊಡ್ಡ ಅವಕಾಶವಾಗಿದೆ, ಸಮಸ್ಯೆಯ ಮೇಲೆ ಗಮನ ಕೇಂದ್ರೀಕರಿಸಿರುವುದಕ್ಕಾಗಿ ನಾನು ಭಾರತಕ್ಕೆ ಎ ಗ್ರೇಡ್ ನೀಡುತ್ತೇನೆ” ಎಂದು ಅವರು ಹೇಳಿದ್ದಾರೆ.
ಜಗತ್ತಿನಲ್ಲಿ ಅಪೌಷ್ಟಿಕತೆಯ ಬಗೆಗಿನ ತಿಳುವಳಿಕೆಯು ಬಹಳಷ್ಟು ಸುಧಾರಿಸಿದೆ, ಗೇಟ್ಸ್ ಫೌಂಡೇಶನ್ ಈ ನಿಟ್ಟಿನಲ್ಲಿ ದೊಡ್ಡ ಧನಸಹಾಯ ನೀಡುತ್ತಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.