ಅಮೃತಸರ: ಕೆನಡಾದ ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ನ ಹೊರಗೆ ಖಾಲಿಸ್ತಾನ್ ಪರ ಬೆಂಬಲಿಗರು ಮಾರ್ಚ್ 2023 ರಲ್ಲಿ ಪ್ರತಿಭಟನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶುಕ್ರವಾರ ಪಂಜಾಬ್ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದೆ.
ಪ್ರತಿಭಟನೆಯ ಸಂದರ್ಭದಲ್ಲಿ, ಪ್ರತಿಭಟನಾಕಾರರು ಭಾರತ-ವಿರೋಧಿ ಘೋಷಣೆಯನ್ನು ಹಾಕಿದ್ದರು, ಹೈ ಕಮಿಷನ್ನ ಗೋಡೆಯ ಮೇಲೆ ಖಲಿಸ್ತಾನಿ ಧ್ವಜಗಳನ್ನು ಕಟ್ಟಿದ್ದರು ಮತ್ತು ಕಟ್ಟಡದ ಆವರಣದೊಳಗೆ ಎರಡು ಗ್ರೆನೇಡ್ಗಳನ್ನು ಕೂಡ ಎಸೆಯಲಾಗಿತ್ತು.
ಜೂನ್ 2023 ರಲ್ಲಿ ದಾಖಲಾದ NIA ಎಫ್ಐಆರ್ ಪ್ರಕಾರ, ಜೈಲಿನಲ್ಲಿರುವ ವಾರಿಸ್ ಪಂಜಾಬ್ ಡಿ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ಸೋದರ ಅಮರ್ಜೋತ್ ಸಿಂಗ್ ನೇತೃತ್ವದಲ್ಲಿ ಖಲಿಸ್ತಾನಿ ಪರ ಬೆಂಬಲಿಗರು ಒಟ್ಟಾವದಲ್ಲಿನ ಭಾರತದ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸಿ ವಿಧ್ವಂಸಕತೆ ಸೃಷ್ಟಿ ಮಾಡಿದ್ದರು.
ಅಮರಜೋತ್ ಸಿಂಗ್ ಮತ್ತು ಇತರರ ನೇತೃತ್ವದ ಗುಂಪಿನ ಸದಸ್ಯರು ಭಾರತ ವಿರೋಧಿ ಕೃತ್ಯಗಳಲ್ಲೂ ನಿರಂತರ ಭಾಗಿಯಾಗಿದ್ದಾರೆ ಎಂದು ಎನ್ಐಎ ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.