ಲಕ್ನೋ: ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿನ ತಮ್ಮ ಸರ್ಕಾರದ ನೀತಿಗಳನ್ನು ಶ್ಲಾಘಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಭಾರತದ ಶೇಕಡಾ 55 ಕ್ಕಿಂತ ಹೆಚ್ಚು ಮೊಬೈಲ್ ಫೋನ್ಗಳು ಈಗ ಯುಪಿ ರಾಜ್ಯದಲ್ಲಿಯೇ ಉತ್ಪಾದನೆಯಾಗುತ್ತಿವೆ ಎಂದು ಹೇಳಿದ್ದಾರೆ.
ನೋಯ್ಡಾದಲ್ಲಿ ಸೆಮಿಕಾನ್ ಇಂಡಿಯಾ 2024 ರ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಆದಿತ್ಯನಾಥ್, ಸೆಮಿಕಂಡಕ್ಟರ್ಗಳು ಮತ್ತು ಡಿಸ್ಪ್ಲೇ ತಯಾರಿಕೆಗಾಗಿ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯನ್ನು ತಂದ ಪ್ರಧಾನಿ ನರೇಂದ್ರ ಮೋದಿಯವರ ‘ದೂರದೃಷ್ಟಿಯುತ ನಾಯಕತ್ವ’ವನ್ನು ಶ್ಲಾಘಿಸಿದರು.
ಐಟಿ ವಲಯ, ಸೆಮಿಕಂಡಕ್ಟರ್ಗಳು, ಡೇಟಾ ಸೆಂಟರ್ಗಳು ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಯುಪಿ ಪ್ರಗತಿ ಸಾಧಿಸಿದೆ ಎಂದು ಹೇಳಿದ ಸಿಎಂ, ಇದರ ಪರಿಣಾಮವಾಗಿ ದೇಶದ ಶೇ 55 ರಷ್ಟು ಮೊಬೈಲ್ ಉತ್ಪಾದನೆ ಮತ್ತು ಶೇ 50 ರಷ್ಟು ಮೊಬೈಲ್ ಘಟಕಗಳ ತಯಾರಿಕೆ ಯುಪಿಯಲ್ಲಿ ನಡೆಯುತ್ತಿದೆ ಎಂದರು.
ಉತ್ತರ ಪ್ರದೇಶ ಗ್ರಾಹಕ ಎಲೆಕ್ಟ್ರಾನಿಕ್ಸ್ನ ಪ್ರಮುಖ ರಫ್ತುದಾರನಾಗಿ ಮಾರ್ಪಟ್ಟಿದೆ ಎಂದ ಸಿಎಂ ಯೋಗಿ, ಏಷ್ಯಾದ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕವನ್ನು ನೋಯ್ಡಾದಲ್ಲಿ ನಿರ್ವಹಿಸುತ್ತಿರುವ ಸ್ಯಾಮ್ಸಂಗ್, ನಗರದಲ್ಲಿ ಡಿಸ್ಪ್ಲೇ ಘಟಕ ಸೌಲಭ್ಯದಲ್ಲಿ ಹೂಡಿಕೆ ಮಾಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಆದಿತ್ಯನಾಥ್ ಅವರು ಯುಪಿ ಸೆಮಿಕಂಡಕ್ಟರ್ ನೀತಿ 2024 ಅನ್ನು ಪ್ರಸ್ತಾಪಿಸಿ, ಇದು ಅರೆವಾಹಕ ಅಭಿವೃದ್ಧಿಯನ್ನು ಉತ್ತೇಜಿಸಲು ಬಂಡವಾಳದ ಮೇಲಿನ ಸಬ್ಸಿಡಿಗಳು, ಬಡ್ಡಿ ರಿಯಾಯಿತಿಗಳು ಮತ್ತು ಭೂಮಿ, ಸ್ಟ್ಯಾಂಪ್ ಡ್ಯೂಟಿ ಮತ್ತು ವಿದ್ಯುತ್ ವೆಚ್ಚಗಳಲ್ಲಿನ ಕಡಿತ ಸೇರಿದಂತೆ ಪ್ರೋತ್ಸಾಹಕಗಳನ್ನು ಹೊಂದಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.