ನವದೆಹಲಿ: ತನ್ನ ದೇಶಕ್ಕೆ ಬೇಕಾದ 10,000 ನಿರ್ಮಾಣ ಕಾರ್ಮಿಕರು ಮತ್ತು 5,000 ಆರೈಕೆದಾರರನ್ನು ನೇಮಿಸಿಕೊಳ್ಳಲು ಇಸ್ರೇಲ್ ಭಾರತದಲ್ಲಿ ನೇಮಕಾತಿ ಅಭಿಯಾನವನ್ನು ಪ್ರಾರಂಭಿಸುತ್ತಿದೆ.
ಈ ವರ್ಷದ ಆರಂಭದಲ್ಲೂ ಕೂಡ ಇದೇ ರೀತಿಯ ನೇಮಕಾತಿಯನ್ನು ಇಸ್ರೇಲ್ ನಡೆಸಿತ್ತು.
ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿನ ಕುಶಲ ಕಾರ್ಮಿಕರ ಕೊರತೆಯನ್ನು ನೀಗಿಸಲು ಏಕಕಾಲದಲ್ಲಿ 10,000 ನಿರ್ಮಾಣ ಕಾರ್ಮಿಕರು ಮತ್ತು 5,000 ಆರೈಕೆದಾರರಿಗಾಗೆ ಮತ್ತೊಮ್ಮೆ ನೇಮಕಾತಿ ಕೈಗೊಳ್ಳಲು ಇಸ್ರೇಲ್ ಇತ್ತೀಚೆಗೆ ಭಾರತವನ್ನು ಸಂಪರ್ಕಿಸಿದೆ ಎಂದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ತಿಳಿಸಿದೆ.
ಇಸ್ರೇಲ್ನ ಜನಸಂಖ್ಯೆ, ವಲಸೆ ಮತ್ತು ಗಡಿ ಪ್ರಾಧಿಕಾರ (PIBA) ನಾಲ್ಕು ನಿರ್ದಿಷ್ಟ ಕೆಲಸಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಇದರಲ್ಲಿ ಫ್ರೇಮ್ವರ್ಕ್, ಐರನ್ ಬೆಂಡಿಂಗ್, ಪ್ಲ್ಯಾಸ್ಟರಿಂಗ್ ಮತ್ತು ಸೆರಾಮಿಕ್ ಟೈಲಿಂಗ್ ಸೇರಿದೆ.
PIBA ತಂಡವು ಮುಂಬರುವ ವಾರದಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ, ಅವರ ಮಾನದಂಡಗಳು ಮತ್ತು ಕೌಶಲ್ಯ ಅಗತ್ಯತೆಗಳನ್ನು ಪೂರೈಸುವವರನ್ನು ಆಯ್ಕೆ ಮಾಡಲು ಅಗತ್ಯ ಕೌಶಲ್ಯ ಪರೀಕ್ಷೆಗಳನ್ನು ನಡೆಸಲಿದ. ಕಟ್ಟಡ ಕಾರ್ಮಿಕರ ನೇಮಕಾತಿಯ ಎರಡನೇ ಹಂತವನ್ನು ಮಹಾರಾಷ್ಟ್ರದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ನಿರ್ಮಾಣ ಕಾರ್ಮಿಕರ ಜೊತೆಗೆ, ಇಸ್ರೇಲ್ ತನ್ನ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು 5,000 ಆರೈಕೆದಾರರನ್ನು ಹುಡುಕುತ್ತಿದೆ.
ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರುವ ಮತ್ತು ಮಾನ್ಯತೆ ಪಡೆದ ಭಾರತೀಯ ಸಂಸ್ಥೆಯಿಂದ ಪ್ರಮಾಣಪತ್ರವನ್ನು ಹೊಂದಿರುವ ಅಭ್ಯರ್ಥಿಗಳು ಮತ್ತು ಕನಿಷ್ಠ 990 ಗಂಟೆಗಳ ಕೆಲಸದ ತರಬೇತಿಯೊಂದಿಗೆ ಕೋರ್ಸ್ ಅನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಎನ್ಎಸ್ಡಿಸಿ ಪ್ರಕಾರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.