ನವದೆಹಲಿ: ಭಾರತೀಯ ಸಂಸ್ಕೃತಿ ಮತ್ತು ಯೋಗದಲ್ಲಿ ಅಲ್ಪಾವಧಿ ಕೋರ್ಸ್ಗಳನ್ನು ಆರಂಭಿಸಲು ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ ಮುಂದಾಗಿದೆ.
ಭಾರತದ ಆಧ್ಯಾತ್ಮ ಮತ್ತು ಪೌರಾಣಿಕ ಅಂಶಗಳನ್ನು ಪ್ರಖ್ಯಾತಪಡಿಸಲು, ಭಾರತದ ಮೌಲ್ಯಗಳನ್ನು ಜಗತ್ತಿನಲ್ಲಿ ಎತ್ತಿ ಹಿಡಿಯುವ ಸಲುವಾಗಿ ಈ ಕೋರ್ಸ್ಗಳನ್ನು ಆರಂಭಿಸಲಾಗುತ್ತಿದೆ.
ವೇದಗಳು, ವಿವಿಧ ಧರ್ಮಗಳ ಸಂಸ್ಕೃತಿ, ಪದ್ಧತಿಗಳು, ಭಾರತದ ಧಾರ್ಮಿಕ ವ್ಯವಸ್ಥೆಗಳು, ಪೌರಾಣಿಕ ಕಥೆ ಸೇರಿದಂತೆ ಹಲವು ವಿಷಯಗಳನ್ನು ಈ ಕೋರ್ಸ್ ಒಳಗೊಳ್ಳಲಿದೆ. ಯೋಗ ಕೋರ್ಸ್ ಕೂಡ ಆಹಾರ, ಆರೋಗ್ಯದ ಬಗ್ಗೆ ತಿಳಿಸಿಕೊಡಲಿದೆ ಎಂದು ಮೂಲಗಳು ತಿಳಿಸಿವೆ.
ಇದೊಂದು ಪಾರ್ಟ್ಟೈಮ್ ಕೋರ್ಸ್ ಆಗಲಿದ್ದು, ಆಸಕ್ತ ವಿದ್ಯಾರ್ಥಿಗಳು ಇದರಲ್ಲಿ ಪಾಳ್ಗೊಳ್ಳಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.