ನವದೆಹಲಿ: ಸಿಖ್ಖರ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡಿದರೆ ನ್ಯಾಯಾಲಯದ ಮೆಟ್ಟಿಲು ಹತ್ತಿಸುವುದಾಗಿ ಬಿಜೆಪಿ ವಕ್ತಾರ ಆರ್ಪಿ ಸಿಂಗ್ ಅವರು ರಾಹುಲ್ಗೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ದೆಹಲಿಯಲ್ಲಿ ನಡೆದ 1984 ರ ಗಲಭೆಯಲ್ಲಿ 3000 ಸಿಖ್ಖರು ಕೊಲ್ಲಲ್ಪಟ್ಟರು ಎಂದು ಅವರು ನೆನಪಿಸಿಕೊಟ್ಟಿದ್ದಾರೆ.
“ದೆಹಲಿಯಲ್ಲಿ 3000 ಸಿಖ್ಖರನ್ನು ಕಗ್ಗೊಲೆ ಮಾಡಲಾಯಿತು, ಅವರ ಪೇಟಗಳನ್ನು ತೆಗೆಯಲಾಯಿತು, ಅವರ ಕೂದಲನ್ನು ಕತ್ತರಿಸಲಾಯಿತು ಮತ್ತು ಗಡ್ಡವನ್ನು ಬೋಳಿಸಲಾಯಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇದು ಸಂಭವಿಸಿತು ಎಂದು ರಾಹುಲ್ ಗಾಂಧಿ ಹೇಳುವುದಿಲ್ಲ. ಒಂದು ವೇಳೆ ಭಾರತದಲ್ಲಿ ಇಂತಹ ಹೇಳಿಕೆಗಳನ್ನು ಅವರು ಪುನರಾವರ್ತಿಸಿದರೆ ನಾನು ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇನೆ ಮತ್ತು ಅವರನ್ನು ನ್ಯಾಯಾಲಯಕ್ಕೆ ಎಳೆಯುತ್ತೇನೆ” ಎಂದು ಆರ್ಪಿ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ತಮ್ಮ ಬಾಯಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತದಲ್ಲಿ ಸಿಖ್ಖರಿಗೆ ಪೇಟ ಧರಿಸಲು ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ನಿಟ್ಟಿನಲ್ಲಿ ನನ್ನ ಹೋರಾಟ ನಡೆಯುತ್ತಿದೆ ಎಂದಿದ್ದಾರೆ. ಈ ಮೂಲಕ ಸಿಖ್ಖರು ಭಾರತದಲ್ಲಿ ಅಪಾಯದಲ್ಲಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, “ರಾಹುಲ್ ಗಾಂಧಿ ಅವರೇ ಲೋಕಸಭಾ ಪ್ರತಿಪಕ್ಷ ಸ್ಥಾನ ಜವಾಬ್ದಾರಿಯುತ ಸ್ಥಾನವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತಿಪಕ್ಷ ನಾಯಕರಾಗಿದ್ದ ವೇಳೆ ವಿದೇಶದಲ್ಲಿ ಎಂದಿಗೂ ದೇಶದ ಪ್ರತಿಷ್ಠೆಯನ್ನು ಕೆಡಿಸಲು ಪ್ರಯತ್ನಿಸಲಿಲ್ಲ ಎಂಬುದನ್ನು ನಾನು ರಾಹುಲ್ ಗಾಂಧಿಗೆ ನೆನಪಿಸಲು ಬಯಸುತ್ತೇನೆ. ಸತತ ಮೂರನೇ ಬಾರಿಗೆ ಸೋಲನುಭವಿಸುವ ಮೂಲಕ ಅವರ ಮನಸ್ಸಿನಲ್ಲಿ ಬಿಜೆಪಿ, ಆರೆಸ್ಸೆಸ್ ಮತ್ತು ಮೋದಿ ವಿರೋಧಿ ಭಾವನೆಗಳು ಬೇರೂರಿವೆ. ಅವರು ನಿರಂತರವಾಗಿ ದೇಶದ ಪ್ರತಿಷ್ಠೆಯನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ. ತುರ್ತುಪರಿಸ್ಥಿತಿಯನ್ನು ಹೇರಿದವರು ಯಾರು? ಅವರು ಭಾರತ್ ಜೋಡೋ ಯಾತ್ರೆಗೆ ಹೋಗುತ್ತಾರೆ ಆದರೆ ಅವರು ಭಾರತದೊಂದಿಗೆ ಅಥವಾ ಭಾರತದ ಜನರೊಂದಿಗೆ ಒಂದಾಗಲು ಸಾಧ್ಯವಿಲ್ಲ” ಎಂದು ಚೌಹಾಣ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.