ನವದೆಹಲಿ: ತಮ್ಮ ಸಿಬ್ಬಂದಿಯ ಕೌಶಲ್ಯ ಮತ್ತು ಸಾಮರ್ಥ್ಯ ನಿರ್ಮಾಣವನ್ನು ವೃದ್ಧಿಸಲು, ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯು ಇಂದು ನವದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರ ಸಮ್ಮುಖದಲ್ಲಿ ವಡೋದರದ ಗತಿ ಶಕ್ತಿ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದ ಎರಡು ಪಡೆಗಳಿಗೆ ಲಾಜಿಸ್ಟಿಕ್ಸ್ನಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳ ವಿವಿಧ ಅಂಶಗಳ ಮೇಲೆ ಆಂತರಿಕ ಪರಿಣತಿಯ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳಾದ PM ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಯೋಜನೆ 2021 ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ 2022 ಗಳಿಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಈ ಸಹಯೋಗವನ್ನು ರಕ್ಷಣೆಯಲ್ಲಿ ‘ಆತ್ಮನಿರ್ಭರತೆ’ಯ ದೃಷ್ಟಿಯೊಂದಿಗೆ ಸಶಸ್ತ್ರ ಪಡೆಗಳ ಲಾಜಿಸ್ಟಿಕ್ಸ್ ಬೆನ್ನೆಲುಬನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಒಂದು ಸ್ಮರಣೀಯ ಪಾಲುದಾರಿಕೆ ಎಂದು ಬಣ್ಣಿಸಿದರು.
“ಒಂದು ಸಮರ್ಥ ಲಾಜಿಸ್ಟಿಕ್ಸ್ ವ್ಯವಸ್ಥೆಯು ಪಡೆಗಳನ್ನು ತ್ವರಿತವಾಗಿ ಸಜ್ಜುಗೊಳಿಸುವಲ್ಲಿ ಮತ್ತು ಕಡಿಮೆ ಸಮಯದಲ್ಲಿ ಸಂಪನ್ಮೂಲಗಳನ್ನು ಸರಿಯಾದ ಸ್ಥಳಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ಪಡೆಗಳು ಕಾರ್ಯನಿರ್ವಹಿಸುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ನಮಗೆ ಪಡೆಗಳು, ಉಪಕರಣಗಳು ಮತ್ತು ಸರಬರಾಜುಗಳ ತಡೆರಹಿತ ಚಲನೆಯ ಅಗತ್ಯವಿದೆ. ಜ್ಞಾನ, ನಾವೀನ್ಯತೆ ಮತ್ತು ಸಹಯೋಗದ ಮೂಲಕ ನಮ್ಮ ಪಡೆಗಳ ಅಗತ್ಯಗಳನ್ನು ಹೇಗೆ ಪೂರೈಸಬಹುದು ಎಂಬ ವಿಷಯದಲ್ಲಿ ಒಪ್ಪಂದ ಬಹಳ ಮಹತ್ವದ್ದಾಗಿದೆ” ಎಂದು ಅವರು ಹೇಳಿದರು.
ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಸರ್ಕಾರದ ದೃಷ್ಟಿಕೋನವನ್ನು ಸಾಧಿಸಲು ಈ ತಿಳಿವಳಿಕೆ ಒಪ್ಪಂದವು ಪ್ರಯೋಜನಕಾರಿಯಾಗಿದೆ ಎಂದು ರಾಜನಾಥ್ ಸಿಂಗ್ ಪ್ರತಿಪಾದಿಸಿದರು. “ನಮಗೆ ಲಾಜಿಸ್ಟಿಕ್ಸ್ನಲ್ಲಿ ಪರಿಣತಿ ಬೇಕಾದರೆ, ಗತಿ ಶಕ್ತಿ ವಿಶ್ವವಿದ್ಯಾಲಯದಂತಹ ನಮ್ಮ ಸ್ವಂತ ಸಂಪನ್ಮೂಲಗಳಿಂದ ನಾವು ಅದರ ತರಬೇತಿಯನ್ನು ಪಡೆಯಬೇಕು. ನಮಗೆ ಉಪಕರಣಗಳು ಬೇಕಾದರೆ, ನಾವು ಅದನ್ನು ಭಾರತದಲ್ಲಿಯೇ ತಯಾರಿಸಬೇಕು. ಆತ್ಮನಿರ್ಭರದಿಂದ ಮಾತ್ರ ಬಲಿಷ್ಠ ಭಾರತದ ಅಡಿಪಾಯ ಹಾಕಲು ಸಾಧ್ಯ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.