ನವದೆಹಲಿ: ಸುದ್ದಿ ಸಂಸ್ಥೆ ಎಎನ್ಐ ಬಗೆಗಿನ ಮಾಹಿತಿಗಳನ್ನು ಎಡಿಟ್ ಮಾಡಿದ ಮೂಲದ ಬಗ್ಗೆ ಮಾಹಿತಿ ನೀಡದಿರುವ ಜನಪ್ರಿಯ ಮತ್ತು ಉಚಿತ ಆನ್ಲೈನ್ ವಿಶ್ವಕೋಶವಾದ ವಿಕಿಪೀಡಿಯಾಕ್ಕೆ ದೆಹಲಿ ಹೈಕೋರ್ಟ್ ಗುರುವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಭಾರತೀಯ ಕಾನೂನುಗಳನ್ನು ಅನುಸರಿಸದಿರುವ ಬಗ್ಗೆ ವಿಕಿಪೀಡಿಯಾಗೆ ಎಚ್ಚರಿಕೆ ನೀಡಿದೆ.
“ನಿಮಗೆ ಭಾರತ ಇಷ್ಟವಾಗದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ. ನಿಮ್ಮ ಸೈಟ್ ಅನ್ನು ನಿರ್ಬಂಧಿಸಲು ನಾವು ಸರ್ಕಾರವನ್ನು ಕೇಳುತ್ತೇವೆ” ಎಂದು ಹೈಕೋರ್ಟ್ ಹೇಳಿದೆ.
ಸುದ್ದಿ ಸಂಸ್ಥೆಯ ಮಾಹಿತಿಯುಳ್ಳ ಪುಟಕ್ಕೆ ಕೆಲವು ಎಡಿಟ್ಗಳನ್ನು ಮಾಡಲು ಅನುಮತಿಸಿದ್ದಕ್ಕಾಗಿ ವಿಕಿಪೀಡಿಯಾದಿಂದ ಮಾನನಷ್ಟ ಮೊಕದ್ದಮೆ ಹೂಡಿ ANI ಸಲ್ಲಿಸಿದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಎಡಿಟ್ ಮಾಡಲಾದ ಅಂಶವು ANI ಅನ್ನು ಭಾರತ ಸರ್ಕಾರದ “ಪ್ರಚಾರ ಸಾಧನ” ಎಂದು ಉಲ್ಲೇಖಿಸಿದೆ. ಎಡಿಟ್ ಮಾಡಿದ ಮೂರು ಖಾತೆಗಳ ಬಗ್ಗೆ ವಿವರಗಳನ್ನು ಬಹಿರಂಗಪಡಿಸಲು ವಿಕಿಪೀಡಿಯಾಕ್ಕೆ ನ್ಯಾಯಾಲಯವು ಆದೇಶ ನೀಡಿತ್ತು, ಆದರೆ ಅದನ್ನು ಬಹಿರಂಗಪಡಿಸಲಾಗಿಲ್ಲ.
ಆದರೆ ವಿಕಿಪೀಡಿಯಾ ತನ್ನ ಕಡೆಯಿಂದ ಕೆಲವು ದಾಖಲೆಗಳ ಸಲ್ಲಿಕೆಗೆ ಬಾಕಿ ಉಳಿದಿರುವ ಕಾರಣ ಮಾಹಿತಿಯ ಬಿಡುಗಡೆಯು ವಿಳಂಬವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.