ನವದೆಹಲಿ: ಕೇಂದ್ರ ಕೃಷಿ ಸಚಿವ ಶಿವರಾಜ್ ಚೌಹಾಣ್ ಅವರು ಮಂಗಳವಾರ ನವದೆಹಲಿಯಲ್ಲಿ ಅಗ್ರಿಶೂರ್ ಯೋಜನೆಯನ್ನು ಅನಾವರಣಗೊಳಿಸಿದ್ದು, ಇದು ಕೃಷಿ ಸ್ಟಾರ್ಟಪ್ಗಳನ್ನು ಸಶಕ್ತಗೊಳಿಸಲು ವಿನ್ಯಾಸಗೊಳಿಸಲಾದ ಮೀಸಲು ನಿಧಿಯಾಗಿದೆ. ಈ ರೂ 750 ಕೋಟಿಯ ಉಪಕ್ರಮವು ಭಾರತ ಸರ್ಕಾರ, ನಬಾರ್ಡ್ ಮತ್ತು ಖಾಸಗಿ ಹೂಡಿಕೆದಾರರ ಕೊಡುಗೆಗಳ ಬೆಂಬಲದೊಂದಿಗೆ ತಂತ್ರಜ್ಞಾನ-ಚಾಲಿತ ಕೃಷಿ ಸ್ಟಾರ್ಟ್ಅಪ್ಗಳು ಮತ್ತು ಗ್ರಾಮೀಣ ಉದ್ಯಮಗಳನ್ನು ಹೆಚ್ಚಿಸಲಿದೆ.
ಈ ಸಂದರ್ಭದಲ್ಲಿ ಶಿವರಾಜ್ ಚೌಬಾಣ್ ಅವರು ಅಗ್ರಿಶೂರ್ ಫಂಡ್ ಮತ್ತು ಕೃಷಿ ನಿವೇಶ್ ಪೋರ್ಟಲ್ ಅನ್ನು ಸಹ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಚೌಹಾಣ್ ಅವರು, “ಕೃಷಿ ಮೂಲಸೌಕರ್ಯ ನಿಧಿಗೆ ಈಗಾಗಲೇ 78,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಹೂಡಲಾಗಿದೆ, ಇದರ ಪರಿಣಾಮವಾಗಿ 65,000 ಕ್ಕೂ ಹೆಚ್ಚು ಮೂಲಸೌಕರ್ಯ ಯೋಜನೆಗಳು ಪೂರ್ಣಗೊಂಡಿವೆ. ಅಗ್ರಿ ಇನ್ಫ್ರಾ ಫಂಡ್ ವರದಾನವಾಗಿ ಹೊರಹೊಮ್ಮಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಬ್ಯಾಂಕರ್ಗಳ ಅನುಪಮ ಕೊಡುಗೆಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹೇಳಿದರು.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಚೌಹಾಣ್, ಅನಗತ್ಯವಾದ ಸೌಲಭ್ಯಗಳ ಸೃಷ್ಟಿಯ ಬಗ್ಗೆ ಎಚ್ಚರಿಕೆ ನೀಡಿದರು. ಮಾತ್ರವಲ್ಲದೇ ಸೂಕ್ತವಾದ ಮೂಲಸೌಕರ್ಯ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಕೋಲ್ಡ್ ಸ್ಟೋರೇಜ್ ಮತ್ತು ಮಾಗಿದ ಕೇಂದ್ರಗಳಂತಹ ಮೂಲಭೂತ ಸೌಕರ್ಯಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು. ಫಂಡ್ ಪರಿಣಾಮಕಾರಿಯಾಗಿ ಉಳಿಯುತ್ತದೆ ಎಂದು ಚೌಹಾಣ್ ಭರವಸೆ ನೀಡಿದರು ಮತ್ತು ಇದರ ಪೂರ್ಣ ಲಾಭ ಪಡೆಯಲು ಸ್ಟಾರ್ಟ್ಅಪ್ಗಳನ್ನು ಪ್ರೋತ್ಸಾಹಿಸಿದರು. ರೈತರನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ‘ಕೃಷಿ ದೇಶದ ಬೆನ್ನೆಲುಬು, ರೈತರೇ ಜೀವನಾಡಿ’ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.