ಇಂಫಾಲ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಕ್ರಮೇಣ ಕಡಿಮೆಯಾಗುತ್ತಿದ್ದು, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಕೇಂದ್ರದ ಸಹಾಯದಿಂದ ಆರು ತಿಂಗಳಲ್ಲಿ ರಾಜ್ಯದಲ್ಲಿ ಶಾಂತಿಯನ್ನು ಸಂಪೂರ್ಣವಾಗಿ ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ ಮತ್ತು ತಾನು ಅಪರಾಧ ಮಾಡಿಲ್ಲ ಅಥವಾ ಹಗರಣವನ್ನು ಹುಟ್ಟುಹಾಕಿಲ್ಲ ಎಂದು ಹೇಳುವ ಮೂಲಕ ರಾಜೀನಾಮೆ ನೀಡುವ ವದಂತಿಯನ್ನು ತಳ್ಳಿಹಾಕಿದ್ದಾರೆ.
ಗುರುವಾರ ಮಾಧ್ಯಮಗಳಿಗೆ ಸಂದರ್ಶನ ನೀಡಿದ ಅವರು, ಕುಕಿ-ಜೊ ಮತ್ತು ಮೈಟೆಯ್ ನಾಯಕರೊಂದಿಗೆ ಮಾತುಕತೆ ನಡೆಸಲು ರಾಯಭಾರಿಯನ್ನು ನೇಮಿಸಿರುವುದಾಗಿ ಮೊದಲ ಬಾರಿಗೆ ಬಹಿರಂಗಪಡಿಸಿದರು. ಅಧಿಕೃತ ವರದಿಯ ಪ್ರಕಾರ, ಮೇ 2023 ರಿಂದ ಕುಕಿ-ಜೋ ಮತ್ತು ಮೈಟೆಯ್ ಜನಾಂಗೀಯ ಗುಂಪುಗಳ ನಡುವಿನ ಘರ್ಷಣೆಯಲ್ಲಿ 226 ಮಂದಿ ಸಾವನ್ನಪ್ಪಿದ್ದಾರೆ.
“ಸಂಘರ್ಷವನ್ನು ಮಾತುಕತೆಯಿಂದ ಪರಿಹರಿಸಬಹುದು. ಸಂವಾದವೊಂದೇ ದಾರಿ” ಎಂದು ಸಿಂಗ್ ಹೇಳಿದರು. ನಾಗಾ ಎಂಎಲ್ಎ ಮತ್ತು ಹಿಲ್ ಏರಿಯಾ ಸಮಿತಿಯ ಅಧ್ಯಕ್ಷರಾದ ಡಿಂಗ್ಂಗ್ಲುಂಗ್ ಗಂಗ್ಮೇ ಅವರನ್ನು ಮಾತುಕತೆಗೆ ರಾಯಭಾರಿಯಾಗಿ6 ನೇಮಿಸಲಾಗಿದೆ ಎಂದಿದ್ದಾರೆ.
ಗೃಹ ಸಚಿವಾಲಯ ಅಥವಾ ಇತರ ಏಜೆನ್ಸಿಗಳ ಮೂಲಕ ಶಾಂತಿಯನ್ನು ತರುವಲ್ಲಿ ಕೇಂದ್ರ ಸರ್ಕಾರದ ಪಾಲ್ಗೊಳ್ಳುವಿಕೆ ನಿರ್ಣಾಯಕವಾಗಿರುತ್ತದೆ ಎಂದ ಅವರು, ಸಂಘರ್ಷ ಹೆಚ್ಚು ಕಾಲ ಮುಂದುವರೆಯುತ್ತದೆ ಎಂದು ನಾನು ಭಾವಿಸುವುದಿಲ್ಲ. 5-6 ತಿಂಗಳೊಳಗೆ ಶಾಂತಿ ಮರಳಬೇಕು. ಇದು ನಮ್ಮ ಭರವಸೆ ಮತ್ತು ನಾನು ಸಹ ಆತ್ಮವಿಶ್ವಾಸ ಹೊಂದಿದ್ದೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.