ನವದೆಹಲಿ: 10 ರಾಜ್ಯಗಳಲ್ಲಿ 12 ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಬೃಹತ್ ಯೋಜನೆಗೆ ಸಂಪುಟ ಹಸಿರು ನಿಶಾನೆ ತೋರಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಇಂದು ಪ್ರಕಟಿಸಿದ್ದಾರೆ.
ಆರು ಪ್ರಮುಖ ನಗರಗಳಲ್ಲಿ ಕೈಗಾರಿಕಾ ಕಾರಿಡಾರ್ಗಳು ಬರಲಿವೆ. ಉತ್ಪಾದನೆಯ ಉತ್ತೇಜನಕ್ಕಾಗಿನ ಈ ಯೋಜನೆಗೆ ಸರ್ಕಾರವು ರೂ 28,602 ಕೋಟಿಗಳನ್ನು ಮೀಸಲಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯ ನಂತರ ಸಚಿವರು ಹೇಳಿದರು.
ಉತ್ತರಾಖಂಡದ ಖುರ್ಪಿಯಾ, ಪಂಜಾಬ್ನ ರಾಜ್ಪುರ-ಪಟಿಯಾಲ, ಮಹಾರಾಷ್ಟ್ರದ ದಿಘಿ, ಕೇರಳದ ಪಾಲಕ್ಕಾಡ್, ಯುಪಿಯ ಆಗ್ರಾ ಮತ್ತು ಪ್ರಯಾಗ್ರಾಜ್, ಬಿಹಾರದ ಗಯಾ, ತೆಲಂಗಾಣದ ಜಹೀರಾಬಾದ್, ಎಪಿಯ ಓರ್ವಕಲ್ ಮತ್ತು ಕೊಪ್ಪರ್ತಿ ಮತ್ತು ರಾಜಸ್ಥಾನದ ಜೋಧ್ಪುರ-ಪಾಲಿಯಲ್ಲಿ ಕೈಗಾರಿಕಾ ಪ್ರದೇಶಗಳು ನೆಲೆಗೊಳ್ಳಲಿವೆ.
“ದೇಶದ ಕೈಗಾರಿಕಾ ಭೂದೃಶ್ಯವನ್ನು ಪರಿವರ್ತಿಸಲು ಈ ಕ್ರಮವು ಕೈಗಾರಿಕಾ ನೋಡ್ಗಳು ಮತ್ತು ನಗರಗಳ ದೃಢವಾದ ಜಾಲವನ್ನು ಸೃಷ್ಟಿಸಲಿವೆ, ಅದು ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ” ಎಂದು ಸರ್ಕಾರ ಹೇಳಿದೆ.
ಇದು ಉದ್ಯೋಗಕ್ಕೆ ದೊಡ್ಡ ಅವಕಾಶವನ್ನು ಒದಗಿಸುತ್ತದೆ. ಒಟ್ಟಾರೆಯಾಗಿ, ಸ್ಮಾರ್ಟ್ ಸಿಟಿ ಯೋಜನೆಯು ಸುಮಾರು 10 ಲಕ್ಷ ಜನರಿಗೆ ಉದ್ಯೋಗ ನೀಡಲಿದೆ. ಇದು ಪರೋಕ್ಷವಾಗಿ 30 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಸಚಿವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.