ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರ ಅತ್ಯಾಚಾರ ಮತ್ತು ಹತ್ಯೆಯ ಕುರಿತು ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆಯನ್ನು ನೀಡಿದ್ದು, ತಾನು ಘಟನೆಯ ಬಗ್ಗೆ ನಿರಾಶೆಗೊಂಡಿದ್ದೇನೆ ಮತ್ತು ಗಾಬರಿಗೊಂಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಮಹಿಳೆಯರಿಗೆ ಕಿರುಕುಳ ನೀಡುವ, ಕ್ರೂರವಾಗಿ ನಡೆಸಲಾಗುವ ಮತ್ತು ಕೊಲೆ ಮಾಡುವ ಮನಸ್ಥಿತಿಯನ್ನು ಅವರು ಹೇಸಿಗೆಯ ವಿಕೃತಿ ಎಂದು ಟೀಕಿಸಿದ್ದಾರೆ. ಅಲ್ಲದೇ ಇಂತಹ ಶೋಚನೀಯ ಮನಸ್ಥಿತಿಗಳು ಹೆಣ್ಣನ್ನು ಕೀಳು ಮನುಷ್ಯಳಾಗಿ ನೋಡುತ್ತದೆ, ಕಡಿಮೆ ಶಕ್ತಿಶಾಲಿ, ಕಡಿಮೆ ಸಾಮರ್ಥ್ಯದವಳು ಮತ್ತು ಕಡಿಮೆ ಬುದ್ಧಿವಂತೆ ಎಂದು ಭಾವಿಸುತ್ತದೆ ಎಂದಿದ್ದಾರೆ.
ಹೆಣ್ಣುಮಕ್ಕಳು ಮತ್ತು ಸಹೋದರಿಯರನ್ನು ಇಂತಹ ದೌರ್ಜನ್ಯಕ್ಕೆ ಒಳಪಡಿಸಲು ಯಾವುದೇ ನಾಗರಿಕ ಸಮಾಜವು ಅನುಮತಿಸುವುದಿಲ್ಲ. “ನಿರ್ಭಯಾ ಘಟನೆ (2012 ರಲ್ಲಿ ದೆಹಲಿ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ)ಯ 12 ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಅತ್ಯಾಚಾರಗಳು ನಡೆದಿವೆ. ಈ ಸಾಮೂಹಿಕ ವಿಕೃತಿ ಅಸಹ್ಯಕರವಾಗಿದೆ ಎಂದಿದ್ದಾರೆ.
“ಇತಿಹಾಸವನ್ನು ಎದುರಿಸಲು ಹೆದರುವ ಸಮಾಜಗಳು ಮಾತ್ರ ಸಾಮೂಹಿಕ ವಿಸ್ಮೃತಿಯನ್ನು ಆಶ್ರಯಿಸುತ್ತವೆ. ಭಾರತವು ಇತಿಹಾಸವನ್ನು ನೇರವಾಗಿ ಎದುರಿಸಬೇಕು. ನಾವು ಈ ವಿಕೃತಿಯನ್ನು ಎದುರಿಸಬೇಕು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.