ನವದೆಹಲಿ: ರಾಯ್ಬರೇಲಿಯಲ್ಲಿ ಸರಕು ಸಾಗಣೆ ರೈಲು ಮತ್ತು ರೈಲ್ ಇಂಜಿನ್ ನಡುವೆ ಡಿಕ್ಕಿ ಸಂಭವಿಸಿದ ಘಟನೆಯಲ್ಲಿ ಪ್ರತಿಪಕ್ಷಗಳು ಮಾಡುತ್ತಿರುವ ಸುಳ್ಳು ಆಪಾದನೆಗಳಿಗೆ ಸಂಬಂಧಿಸಿದಂತೆ ರೈಲ್ವೇ ಸಚಿವಾಲಯ ಛೀಮಾರಿ ಹಾಕಿದೆ. ಇದು ಭಾರತೀಯ ರೈಲ್ವೇ ಮತ್ತು ಕಾಂಗ್ರೆಸ್ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮಾತಿನ ಚಕಮಕಿಗೆ ಆಸ್ಪದ ನೀಡಿದೆ.
ಕಾಂಗ್ರೆಸ್ ರೈಲ್ವೇ ಸಚಿವ ಅಶ್ವನಿ ವೈಷ್ಣವ್ ಅವರನ್ನು ‘ರೀಲ್ ಮಿನಿಸ್ಟರ್’ ಎಂದು ಕರೆದು ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು.
ಇದಕ್ಕೆ ತೀಕ್ಷ್ಣವಾದ ಉತ್ತರ ನೀಡಿರುವ ರೈಲ್ವೇ ಸಚಿವಾಲಯವು, ಸರಕು ರೈಲುಗಳಿಗೆ ಡಿಕ್ಕಿ ಹೊಡೆದ ಎಂಜಿನ್ ಭಾರತೀಯ ರೈಲ್ವೇಯ ಅಡಿಯಲ್ಲಿ ಬರುವುದಿಲ್ಲ. ಅಲ್ಲದೇ ಚಾಲಕ ಕೂಡ ರೈಲ್ವೆಗೆ ಸೇರಿದವನಲ್ಲ ಎಂದು ಸಚಿವಾಲಯ ತಿಳಿಸಿದೆ.
ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಸರಕು ಸಾಗಣೆ ರೈಲು ಮತ್ತು ರೈಲು ಇಂಜಿನ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಂಜಿನ್ ಹಳಿ ತಪ್ಪಿದೆ. ಉಂಚಹಾರ್ನಲ್ಲಿರುವ ಎನ್ಟಿಪಿಸಿ ವಿದ್ಯುತ್ ಯೋಜನೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಅಪಘಾತವು ಸಿಗ್ನಲ್ ಮತ್ತು ಟ್ರ್ಯಾಕ್ ಜೋಡಣೆಯ ಬಗ್ಗೆ ತಪ್ಪು ಸಂವಹನದಿಂದ ಸಂಭವಿಸಿದೆ. ಘಟನೆಯಲ್ಲಿ ಲೊಕೊ ಪೈಲಟ್ ಮತ್ತು ಮತ್ತೊಬ್ಬ ವ್ಯಕ್ತಿಗೆ ಗಾಯಗಳಾಗಿವೆ.
ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ನ ಮತ್ತೊಂದು ಆಪಾದನೆಯನ್ನು ರೈಲ್ವೇ ಸಚಿವಾಳಯ ತಳ್ಳಿ ಹಾಕಿತ್ತು.
ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಫುಟ್ಓವರ್ ಬ್ರಿಡ್ಜ್ಗೆ ಅಡ್ಡಿಪಡಿಸಿದ ಬೀದಿ ವ್ಯಾಪಾರಿಯ ವಿರುದ್ಧ ದೆಹಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತಾ 2023 ರ ಅಡಿಯಲ್ಲಿ ಮೊದಲ ಎಫ್ಐಆರ್ ದಾಖಲಿಸಿದ್ದಾರೆ ಎಂಬ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರ ಆರೋಪವನ್ನು ರೈಲ್ವೆ ಸಚಿವಾಲಯ ತಿರಸ್ಕರಿಸಿತ್ತು.
Don’t mislead the Nation. Neither the engine nor the driver is of Indian Railways. Please stop demoralising the Railway family.https://t.co/1ezOTiXYWr pic.twitter.com/mJ5LRDyR9i
— Ministry of Railways (@RailMinIndia) August 27, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.