ನವದೆಹಲಿ: ಜಾಗತಿಕವಾಗಿ ಹೆಚ್ಚುತ್ತಿರುವ mpox (ಮಂಕಿ ಫಾಕ್ಸ್) ಪ್ರಕರಣಗಳು ಭಾರತದಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಆಫ್ರಿಕಾ, ಥೈಲ್ಯಾಂಡ್, ಪಾಕಿಸ್ತಾನ ಮತ್ತು ಫಿಲಿಪೈನ್ಸ್ನಂತಹ ದೇಶಗಳು ಈಗಾಗಲೇ ತೀವ್ರವಾಗಿ ಬಾಧಿತವಾಗಿವೆ. ಆಗಸ್ಟ್ 14 ರಂದು, ವಿಶ್ವ ಆರೋಗ್ಯ ಸಂಸ್ಥೆ (WHO) mpox ಅನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದ್ದು, ವೈರಸ್ನ ಹೊಸ ತಳಿ, ಕ್ಲೇಡ್ I, ಹೆಚ್ಚು ಹರಡುತ್ತದೆ ಮತ್ತು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಎಂದಿದೆ.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಭಾರತವು mpox ಅನ್ನು ಎದುರಿಸಲು ಸ್ಥಳೀಯ RT-PCR ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ, ಇದನ್ನು ಇತ್ತೀಚೆಗೆ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಅನುಮೋದಿಸಿದೆ.
ಸೀಮೆನ್ಸ್ ಹೆಲ್ತಿನಿಯರ್ಸ್ ಅಭಿವೃದ್ಧಿಪಡಿಸಿದ IMDX ಮಂಕಿಪಾಕ್ಸ್ ಡಿಟೆಕ್ಷನ್ RT-PCR ಅಸ್ಸೇಯು CDSCO ನಿಂದ ಉತ್ಪಾದನಾ ಅನುಮೋದನೆಯನ್ನು ಪಡೆದುಕೊಂಡಿದೆ. ಇದು “ಮೇಕ್ ಇನ್ ಇಂಡಿಯಾ” ಉಪಕ್ರಮಕ್ಕೆ ಮಹತ್ವದ ಮೈಲಿಗಲ್ಲು ಎಂದೇ ವಿಶ್ಲೇಷಿಸಲಪಟ್ಟಿದೆ.
“IMDX ಮಂಕಿಪಾಕ್ಸ್ ಪತ್ತೆ RT-PCR ಅನ್ನು ವಡೋದರಾದಲ್ಲಿರುವ ನಮ್ಮ ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್ ಸೌಲಭ್ಯದಲ್ಲಿ ತಯಾರಿಸಲಾಗುತ್ತಿದೆ, ಇದು ವರ್ಷಕ್ಕೆ ಒಂದು ಮಿಲಿಯನ್ ಪ್ರತಿಕ್ರಿಯೆಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾರ್ಖಾನೆಯು ಕಿಟ್ಗಳನ್ನು ಲಭ್ಯವಾಗುವಂತೆ ಮಾಡಲು ಸಿದ್ಧವಾಗಿದೆ” ಎಂದು ಸೀಮೆನ್ಸ್ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.