ಬೆಂಗಳೂರು: ಪ್ರಾಣವನ್ನು ಉಳಿಸುವ ನಿಟ್ಟಿನಲ್ಲಿ ಚಲಿಸುತ್ತಿರುವ ಅಂಬ್ಯಲೆನ್ಸ್ನ್ನು ಇತರ ವಾಹನ ಚಾಲಕರು ಓವರ್ ಟೇಕ್ ಮಾಡಿದರೆ ಅಥವಾ ಅದರ ದಾರಿಗೆ ಅಡ್ಡ ಬಂದರೆ ಇನ್ನು ಮುಂದೆ ಅಂತವರ ಡ್ರೈವಿಂಗ್ ಲೈಸೆನ್ಸ್ ರದ್ದಾಗಲಿದೆ.
ವಿಧಾನಸೌಧದಲ್ಲಿ ಹೆಚ್ಚುವರಿಯಾಗಿ 108 ಆರೋಗ್ಯ ಕವಚ ಅಂಬ್ಯಲೆನ್ಸ್ಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಅತಿಯಾದ ಟ್ರಾಫಿಕ್ ಅಂಬ್ಯಲೆನ್ಸ್ ಚಾಲಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅವರನ್ನು ಓವರ್ ಟೇಕ್ ಮಾಡುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಇದನ್ನು ತಡೆಯಲು, ಡ್ರೈವಿಂಗ್ ಲೈಸೆನ್ಸ್ ರದ್ದಿಗೆ ಮುಂದಾಗಿದ್ದೇವೆ, ಈ ಬಗ್ಗೆ ಸಾರಿಗೆ ಪೊಲೀಸರಿಗೆ ಅಗತ್ಯ ನಿರ್ದೇಶನಗಳನ್ನು ಜಾರಿಗೊಳಿಸುತ್ತೇವೆ’ ಎಂದಿದ್ದಾರೆ.
ಅಂಬ್ಯಲೆನ್ಸ್ ಮತ್ತು ಅಗ್ನಿಶಾಮಕ ವಾಹನ ಮುಂದಕ್ಕೆ ಹೋಗುವಂತೆ ಎಲ್ಲಾ ಚಾಲಕರು ಸಹಕರಿಸಬೇಕು, ಈ ನಿಯಮ ಮುರಿದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರೋಗಿಗಳಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಕಷ್ಟವಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.