ರಾಯ್ಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ನಕ್ಸಲೀಯರು ಪೊಲೀಸರ ಮುಂದೆ ಶಸ್ತ್ರ ತ್ಯಾಗ ಮಾಡಿ ಶರಣಾಗಿದ್ದಾರೆ. 25 ಮಂದಿಯ ಪೈಕಿ ಐವರು ನಟೋರಿಯಸ್ ನಕ್ಸಲರಾಗಿದ್ದರು ತಲಾ ತಲೆ ಮೇಲೆ 8 ಲಕ್ಷ ರೂಪಾಯಿಗಳ ಬಹುಮಾನ ಹೊತ್ತುಕೊಂಡಿದ್ದರು ಎಂದು ವರಿಗಳು ತಿಳಿಸಿವೆ.
ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಗಂಗ್ಲೂರ್ ಮತ್ತು ಭೈರಮ್ಗಢ ಪ್ರದೇಶ ಸಮಿತಿಗಳಲ್ಲಿ ಸಕ್ರಿಯರಾಗಿದ್ದ ಈ 25 ನಕ್ಸಲೀಯರ ಪೈಕಿ ಇಬ್ಬರು ಮಹಿಳೆಯರು ಸೇರಿದ್ದಾರೆ.
ಇಬ್ಬರು ಮಹಿಳೆಯರನ್ನು ಶಂಬತಿ ಮಡ್ಕಂ (23) ಮತ್ತು ಜ್ಯೋತಿ ಪುಣೆಂ (27) ಎಂದು ಗುರುತಿಸಲಾಗಿದೆ. ಮಾವೋವಾದಿಗಳ ಕಂಪನಿ ನಂ. 2 ರಲ್ಲಿ ಇವರು ಸಕ್ರಿಯರಾಗಿದ್ದರು ಮತ್ತು ತಲೆಯ ಮೇಲೆ ತಲಾ 8 ಲಕ್ಷ ರೂ. ಬಹುಮಾನವನ್ನು ಹೊಂದಿದ್ದರು. ಮಡ್ಕಮ್ 2012 ರಿಂದ ನಕ್ಸಲ್ ಚಳುವಳಿಯಲ್ಲಿ ಸಕ್ರಿಯರಾಗಿದ್ದಳು ಮತ್ತು 2020 ರಲ್ಲಿ ಸುಕ್ಮಾದಲ್ಲಿ ನಡೆದ ಮಿನ್ಪಾ ಹೊಂಚುದಾಳಿಯಲ್ಲಿ ಭಾಗಿಯಾಗಿದ್ದಾಳೆ. ಈ ದಾಳಿಯಲ್ಲಿ 17 ಸೇನಾ ಸಿಬ್ಬಂದಿಗಳು ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ. 2021 ರಲ್ಲಿ 22 ಭದ್ರತಾ ಸಿಬ್ಬಂದಿಯನ್ನು ಕೊಂದ ಟೇಕಲ್ಗುಡೆಮ್ (ಬಿಜಾಪುರ) ದಾಳಿಯಲ್ಲಿ ಕೂಡ ಅವಳು ಭಾಗಿಯಾಗಿದ್ದಳು ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ.
ಟೊಳ್ಳಾದ ಮಾವೋವಾದಿ ಸಿದ್ಧಾಂತದ ಬಗ್ಗೆ ನಿರಾಶೆ ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯದ ಬಗ್ಗೆ ಭ್ರಮನಿರಸನಗೊಂಡು ಅವರು ಶಸ್ತ್ರ ತ್ಯಾಗ ಮಾಡಿ ಈ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶಸ್ತ್ರಾಸ್ತ್ರ ತ್ಯಜಿಸಿದವರಿಗೆ ತಲಾ 25,000 ರೂಪಾಯಿ ನೆರವು ನೀಡಲಾಗಿದ್ದು, ಸರ್ಕಾರದ ನೀತಿಯಂತೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
“ಈ ಶರಣಾಗತಿಯೊಂದಿಗೆ ಜಿಲ್ಲೆಯಲ್ಲಿ ಈ ವರ್ಷ 170 ನಕ್ಸಲೀಯರು ಹಿಂಸಾಚಾರವನ್ನು ತೊರೆದಿದ್ದಾರೆ. ಅಲ್ಲದೆ, ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 346 ಮಾವೋವಾದಿಗಳನ್ನು ಬಂಧಿಸಲಾಗಿದೆ” ಎಂದು ಎಸ್ಪಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.