ಕೈವ್: ರಷ್ಯಾ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳಲ್ಲಿ ಭಾರತವು ಪ್ರಮುಖ ಪ್ರಭಾವ ಬೀರಬಹುದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಉಕ್ರೇನ್ಗೆ ತಮ್ಮ ಮೊದಲ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಝೆಲೆನ್ಸ್ಕಿ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಅವರು ಝೆಲೆಸ್ಕಿಯವರಿಗೆ ಆಹ್ವಾನ ನೀಡಿದರು.
ಮೋದಿಯವರೊಂದಿಗಿನ ದ್ವಿಪಕ್ಷೀಯ ಸಭೆಯ ನಂತರ ಉಕ್ರೇನ್ ಅಧ್ಯಕ್ಷರು ಭಾರತೀಯ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ, ನಡೆಯುತ್ತಿರುವ ಯುದ್ಧವನ್ನು ಅಂತ್ಯಗೊಳಿಸಲು ಸಮಯವನ್ನು ವ್ಯರ್ಥ ಮಾಡದೆ ಉಕ್ರೇನ್ ಮತ್ತು ರಷ್ಯಾ ಎರಡೂ ಒಟ್ಟಿಗೆ ಕುಳಿತುಕೊಳ್ಳಬೇಕು ಮತ್ತು ಫೆಬ್ರವರಿ 2022 ರಲ್ಲಿ ಸಂಘರ್ಷದ ಆರಂಭದಿಂದಲೂ ಭಾರತವು ಶಾಂತಿಯ ಪರವಾಗಿದೆ ಎಂದು ಮೋದಿ ಅವರು ಝೆಲೆನ್ಸ್ಕಿಯವರಿಗೆ ತಿಳಿಸಿದರು.
ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರವನ್ನು ಸುಲಭಗೊಳಿಸಲು ಭಾರತ ತೊಡಗಿಕೊಂಡಿದೆ ಎಂದು ಭಾರತ ಪ್ರತಿಪಾದಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಶೃಂಗಸಭೆಯ ಮಾತುಕತೆಗಳನ್ನು ನಡೆಸಿದ ಆರು ವಾರಗಳ ನಂತರ ಮೋದಿಯವರು ಉಕ್ರೇನ್ಗೆ ಸುಮಾರು ಒಂಬತ್ತು ಗಂಟೆಗಳ ಭೇಟಿ ನೀಡಿದರು. ಈ ವೇಳೆ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವಲ್ಲಿ ಭಾರತದ ಬಲವಾದ ಬದ್ಧತೆಯನ್ನು ಪ್ರಧಾನಿ ಮೋದಿ ಪ್ರತಿಪಾದಿಸಿದರು. ಭಾರತವು ಉಕ್ರೇನ್ನ ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಬೆಂಬಲಿಸುತ್ತದೆ ಮತ್ತು ಇದು ನಿರ್ಣಾಯಕವಾಗಿದೆ ಏಕೆಂದರೆ ವಿಶ್ವದ ಪ್ರತಿಯೊಬ್ಬರೂ ಯುಎನ್ ಚಾರ್ಟರ್ ಅನ್ನು ಸಮಾನವಾಗಿ ಗೌರವಿಸಬೇಕು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.