ನವದೆಹಲಿ: ಜ್ವರ ಮತ್ತು ಶೀತಗಳಿಗೆ ಬಳಸಲಾಗುವ ಆಂಟಿಬಯೋಟಿಕ್ ಮತ್ತು ಮಲ್ಟಿವಿಟಮಿನ್ಗಳು ಸೇರಿದಂತೆ 156 ಫಿಕ್ಸ್ಡ್ ಡೋಸ್ ಸಂಯೋಜನೆಯ ಔಷಧಿಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದ್ದು, ಅವು ಮಾನವನ ಆರೋಗ್ಯಕ್ಕೆ ಹಾನಿಕಾರಕವೆಂದು ಘೋಷಿಸಿದೆ.
ಫಿಕ್ಸೆಡ್ ಡೋಸ್ ಕಾಂಬಿನೇಷನ್ (FDC) ಔಷಧಿಗಳೆಂದರೆ “ಕಾಕ್ಟೈಲ್” ಔಷಧಿಗಳೆಂದೂ ಕರೆಯಲ್ಪಡುವ ಸ್ಥಿರ ಅನುಪಾತದಲ್ಲಿ ಎರಡು ಅಥವಾ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳ ಸಂಯೋಜನೆಯನ್ನು ಹೊಂದಿರುವ ಔಷಧಿಗಳಾಗಿವೆ. ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940 ರ ಸೆಕ್ಷನ್ 26 ಎ ಅಡಿಯಲ್ಲಿ ಈ ಔಷಧಿಗಳ ತಯಾರಿಕೆ, ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸುವ ಗೆಜೆಟ್ ಅಧಿಸೂಚನೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದೆ.
ಕೇಂದ್ರ ಸರ್ಕಾರ ಮತ್ತು DTAB ನೇಮಿಸಿದ ತಜ್ಞರ ಸಮಿತಿಯು ಈ ಔಷಧಗಳನ್ನು ಚಿಕಿತ್ಸೆಗೆ ಬಳಸುವುದು ಸಮರ್ಥನೀಯವಲ್ಲ ಎಂದು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಇವುಗಳನ್ನು ನಿಷೇಧಿಸಲಾಗಿದೆ.
ನಿಷೇಧದ ಪಟ್ಟಿಯಲ್ಲಿ “Aceclofenac 50mg + Paracetamol 125mg ಮಾತ್ರೆಗಳು, ಮೆಫೆನಾಮಿಕ್ ಆಸಿಡ್ ಪ್ಯಾರೆಸಿಟಮಾಲ್ ಇಂಜೆಕ್ಷನ್, Cetirizine HCl ಪ್ಯಾರಸಿಟಮಾಲ್ ಫೆನೈಲ್ಫ್ರಿನ್ HCl, ಲೆವೊಸೆಟಿರಿಝಿನ್ ಫೆನೈಲ್ಫ್ರಿನ್ HCl ಪ್ಯಾರಸಿಟಮಾಲ್, ಪ್ಯಾರಸಿಟಮಾಲ್ ಕ್ಲೋರ್ಫೆನಿರಮೈನ್ ಮ್ಯಾಲೇಟ್ 2 ಮಿಗ್ರಾಂ 0mg” ಸೇರಿವೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.