ಕೈವ್: ಪ್ರಧಾನಿ ನರೇಂದ್ರ ಮೋದಿ ಇಂದು ಯುದ್ಧಪೀಡಿತ ಉಕ್ರೇನ್ಗೆ ತಲುಪಿದ್ದಾರೆ. ಪೊಲೆಂಡ್ ಭೇಟಿಯನ್ನು ಮುಕ್ತಾಯಗೊಳಿಸಿದ ಬಳಿಕ ಮೋದಿ ಉಕ್ರೇನ್ಗೆ ಆಗಮಿಸಿದ್ದಾರೆ. 10 ಗಂಟೆಗಳ ರೈಲು ಪ್ರಯಾಣದ ಬಳಿಕ ಅವರು ಕೈವ್ ತಲುಪಿದ್ದಾರೆ ಎಂದು ವರದಿಗಳು ತಿಲಿಸಿವೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಆಹ್ವಾನದ ಮೇರೆಗೆ ಅಲ್ಲಿಗೆ ಭೇಟಿ ನೀಡಿರುವ ಮೋದಿ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ. ರಷ್ಯಾದೊಂದಿಗೆ ಯುದ್ಧದಲ್ಲಿ ತೊಡಿರುವ ಉಕ್ರೇನ್ಗೆ ಮೋದಿ ಭೇಟಿ ಮಹತ್ವ ಪಡೆದುಕೊಂಡಿದೆ. ಯಾಕೆಂದರೆ ಕೆಳ ದಿನಗಳ ಹಿಂದೆಯಷ್ಟೇ ಅವರು ರಷ್ಯಾಗೆ ಭೇಟಿ ನೀಡಿದ್ದರು.
ಕೈವ್ಗೆ ಆಗಮನದ ನಂತರ, ಪಿಎಂ ಮೋದಿ ಅವರನ್ನು ನಿಲ್ದಾಣದಲ್ಲಿ ಸ್ವಾಗತಿಸಲಾಯಿತು ಮತ್ತು ನಂತರ ಸಭೆಗಳಿಗಾಗಿ ಹಯಾತ್ ಹೋಟೆಲ್ಗೆ ತೆರಳಿದರು. ಭಾರತೀಯ ವಲಸಿಗರು ಹೋಟೆಲ್ನಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿದರು.
ಪಿಎಂ ಮೋದಿಯವರ ಉಕ್ರೇನ್ ನ್ಯಾಷನಲ್ ಮ್ಯೂಸಿಯಂನಲ್ಲಿ ಮಲ್ಟಿಮೀಡಿಯಾ ಮರ್ಟಿಯರಾಲಜಿಸ್ಟ್ಗೂ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ರಷ್ಯಾದ ಆಕ್ರಮಣದಿಂದ ಪ್ರಾಣ ಕಳೆದುಕೊಂಡ ಉಕ್ರೇನ್ ಮಕ್ಕಳಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
ಈ ಉಕ್ರೇನ್ ಮ್ಯೂಸಿಯಂ ಪ್ರದರ್ಶನವು 20 ನೇ ಮತ್ತು 21 ನೇ ಶತಮಾನಗಳ ಪ್ರಮುಖ ಮಿಲಿಟರಿ ಸಂಘರ್ಷಗಳ ದಾಖಲೆಗಳು ಮತ್ತು ಕಲಾಕೃತಿಗಳನ್ನು ಪ್ರದರ್ಶಿಸುತ್ತದೆ, ಉಕ್ರೇನಿಯನ್ನರು ತಮ್ಮ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಗುರುತಿಗಾಗಿ ನಡೆಸಿದ ವೀರೋಚಿತ ಹೋರಾಟವನ್ನು ಎತ್ತಿ ತೋರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.