ವಾರ್ಸಾ: ಪ್ರಧಾನಿ ನರೇಂದ್ರ ಮೋದಿ ಅವರು ಪೋಲ್ಯಾಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರನ್ನು ಇಂದು ಭೇಟಿ ಮಾಡಿ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ಕಳೆದ 45 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್ಗೆ ಭೇಟಿ ನೀಡುತ್ತಿರುವ ಮೊದಲ ಪ್ರವಾಸ ಇದಾಗಿದೆ. ಮೋದಿ ಅವರು ತಮ್ಮ ಎರಡು ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿ ಬುಧವಾರ ಪೋಲೆಂಡ್ಗೆ ಆಗಮಿಸಿದರು, ನಾಳೆ ಅವರು ಉಕ್ರೇನ್ ರಾಜಧಾನಿ ಕೈವ್ಗೆ ಪ್ರಯಾಣಿಸಲಿದ್ದಾರೆ.
ಡೊನಾಲ್ಡ್ ಟಸ್ಕ್ ಜೊತೆಗೆ ಮಾತುಕತೆಗೂ ಮುನ್ನ ಮೋದಿಯವರಿಗೆ ಚಾನ್ಸೆಲರಿಯಲ್ಲಿ ಔಪಚಾರಿಕ ರೆಡ್ ಕಾರ್ಪೆಟ್ ಸ್ವಾಗತ ದೊರೆಯಿತು.
ಪ್ರಧಾನಮಂತ್ರಿ ಟಸ್ಕ್ ಭಾರತದ ಸ್ನೇಹಿತನಾಗಿದ್ದು, ಭಾರತ ಮತ್ತು ಪೋಲೆಂಡ್ ನಡುವಿನ ಬಾಂಧವ್ಯವನ್ನು ವೃದ್ಧಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. 2022 ರಲ್ಲಿ ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಪೋಲೆಂಡ್ ನೀಡಿದ ಸಹಾಯವನ್ನು ಭಾರತದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತ ಮತ್ತು ಪೋಲೆಂಡ್ ಸಹ ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಿಕಟ ಸಮನ್ವಯದಿಂದ ಮುನ್ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದ್ದಾರೆ.
“ಭಾರತ-ಪೋಲೆಂಡ್ ಸಹಭಾಗಿತ್ವದಲ್ಲಿ ಹೊಸ ಹೆಗ್ಗುರುತು! ವಾರ್ಸಾದ ಫೆಡರಲ್ ಚಾನ್ಸೆಲರಿಯಲ್ಲಿ ಪೋಲೆಂಡ್ನ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು ಮತ್ತು ವಿಧ್ಯುಕ್ತ ಸ್ವಾಗತವನ್ನು ನೀಡಿದರು” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ
45 ವರ್ಷಗಳ ನಂತರ ಪೋಲೆಂಡ್ಗೆ ಭಾರತೀಯ ಪ್ರಧಾನಿಯ ಈ ಭೇಟಿಯು ಭಾರತ-ಪೋಲೆಂಡ್ ಪಾಲುದಾರಿಕೆಗೆ ಹೊಸ ವೇಗವನ್ನು ನೀಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಧ್ಯಕ್ಷ ಆಂಡ್ರೆಜ್ ಸೆಬಾಸ್ಟಿಯನ್ ದುಡಾ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.