ಬೈಂದೂರು: ವಾರಾಹಿ ಯೋಜನೆಗೆ ನಡೆದ ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಉಪಯೋಗ ಮತ್ತು ಯೋಜನೆ ಬೈಂದೂರು ಗ್ರಾಮಗಳಿಗೆ ಸಮರ್ಪಕವಾಗಿ ಬಾರದೆ ಇರುವ ಬಗ್ಗೆ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಗ್ರಾಮಸ್ಥರ ಸಮ್ಮುಖದ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬುಧವಾರ ವಾರಾಹಿ ಕಛೇರಿಯಲ್ಲಿ ನಡೆದ ಅಧಿಕಾರಿಗಳು ಮತ್ತು ಬೈಂದೂರು ಕ್ಷೇತ್ರದ ಗ್ರಾಮಗಳಿಗೆ ವಾರಾಹಿ ನೀರುಣಿಸಲು ಇರುವ ಯೋಜನೆಗಳ ಬಗ್ಗೆ ಶಾಸಕರು ಮಾಹಿತಿ ನೀಡಲು ತಿಳಿಸಿದಾಗ, ಈವರೆಗೆ ಯಾವುದೇ ಗ್ರಾಮಕ್ಕೆ ನೀರು ಒದಗಿಸುವ ಸ್ಪಷ್ಟ ಯೋಜನೆ ಇಲ್ಲದೇ ಇರುವುದು ಕಂಡುಬಂದಿದೆ ಎಂದು ಶಾಸಕರು ಹೇಳಿದರು.
ಬೈಂದೂರಿಗೆ ವಾರಾಹಿ ನೀರು ಒದಗಿಸುವ ಆಧುನಿಕ ಹೋರಾಟ ರೂಪಿಸುವುದು ಒಂದು ಭಾಗವಾದರೆ, ಹೊಸದಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸುವ ಅಧಿಕಾರಿಗಳು ಕ್ರಮ ವಹಿಸಬೇಕು ಎಂಬ ಸೂಚನೆಯನ್ನು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೈಂದೂರು ಕ್ಷೇತ್ರಕ್ಕೆ ವಾರಾಹಿ ನೀರು ಒದಗಿಸುವ ಯೋಜನೆ ಯೋಜನೆ ರೂಪಿಸಲು ಅಧಿಕಾರಿಗಳು ಅಥವಾ ಹಂತಕ್ಕೆ ಈವರೆಗೂ ಯಾರಿಗೆ ಸಮರ್ಪಕವಾಗಿ ಕೊಂಡೊಯ್ಯದೇ ಇರುವುದು ಸಭೆಯಲ್ಲಿ ಬೆಳಕಿಗೆ ಬಂದಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ.
ಮೂರು ವರ್ಗದ ಗ್ರಾಮಗಳು
ಈ ಬೈಂದೂರು ಕ್ಷೇತ್ರಕ್ಕೆ ವಾರಾಹಿ ನೀರು ಒದಗಿಸುವ ಮೂರು ವರ್ಗದ ಗ್ರಾಮಗಳ ಪಟ್ಟಿ ಮಾಡಲಾಗಿದೆ. ಅದರಂತೆ ವಾರಾಹಿ ಯೋಜನೆ ವಂಚಿತ ಗ್ರಾಮಗಳು. ಅಂದರೆ, ವಾರಾಹಿ ನೀರು ಬಾರದೇ ಇರುವ ಗ್ರಾಮಗಳು. ಸ್ಥಾಪಿತ ವಂಚಿತ ಗ್ರಾಮಗಳು. ಅಂದರೆ ವಾರಾಹಿ ನೀರು ಅಲ್ಪಸ್ವಲ್ಪ ಬರುತ್ತಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಸಿಗುತ್ತಿಲ್ಲ. ಇನ್ನೊಂದು ಸಂತ್ರಸ್ತ ಗ್ರಾಮಗಳು. ಅಂದರೆ, ವಾರಾಹಿ ಯೋಜನೆ ಕಾಲುವೆ ಹೋಗಿದೆ. ಆದರೆ ಆ ಗ್ರಾಮಕ್ಕೆ ಯಾವುದೇ ಉಪಯೋಗ, ಅನುಕೂಲ ಆಗಿಲ್ಲ. ಹೀಗೆ ಮೂರು ವರ್ಗಗಳಾಗಿ ವಿಂಗಡಿಸಿ, ಈ ಮೂರು ವರ್ಗದ ಗ್ರಾಮ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಸಲು ಬೇಕಾದ ಹೋರಾಟ ರೂಪಿಸಲಾಗಿದೆ ಎಂದು ಶಾಸಕರು ಸ್ಥಾಪಿಸಿದ್ದಾರೆ.
ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ವಾರಾಹಿನೀರು ತರುವ ವಾರಾಹಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಸುದೀರ್ಘ ಹೋರಾಟ ರೂಪಿಸಲಾಗಿದೆ.
ವಾರಾಹಿ ಯೋಜನೆಯಿಂದ ಈವರೆಗೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅನುಕೂಲ ಆಗಿಲ್ಲ. ಯೋಜನೆಯು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಅನ್ವಯಿಸುವಂತೆ ಮತ್ತು ರೈತರಿಗೆ ಅನುಕೂಲವಾಗುವಂತೆ ಸುಧೀರ್ಘ ಹೋರಾಟವನ್ನು ರೂಪಿಸಲಾಗಿದೆ. ಇದಕ್ಕಾಗಿ ಹೋರಾಟ ಸಮಿತಿ ರಚನೆ ಮಾಡಿಲ್ಲ. ಈ ಸಮಿತಿ ಸಿದ್ದಾಪುರ ಭಾಗದ ಒಂದು ಸಭೆಯನ್ನು ನಡೆಸಿದೆ. ಎಲ್ಲ ಗ್ರಾಮ ಸಭೆ ನಡೆಸಲಿದೆ. ವಿವಿಧ ಮಾದರಿಯಲ್ಲಿ ಹೋರಾಟ.
ಸಮಿತಿ ಸಭೆಯ ನಿರ್ಧಾರದಂತೆ ಮುಂದಿನ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲಾ ರೈತರ ಅನುಕೂಲಕ್ಕಾಗಿ ಸುದೀರ್ಘ ಹೋರಾಟ ನಡೆಯಲಿದೆ ಎಂದು ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.