ಮುಂಬಯಿ: ಅಕ್ಟೋಬರ್ 15 ನಮ್ಮನ್ನಗಲಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನ. ಮಹಾರಾಷ್ಟ್ರದಲ್ಲಿ ಈ ದಿನವನ್ನು ವಾಚನ್ ಪ್ರೇರಣಾ ದಿವಸ್ (ಓದುವ ದಿನ)ವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ತಮ್ಮ ಬ್ಯಾಗ್ಗಳನ್ನು ಮನೆಯಲ್ಲಿಯೇ ಬಿಟ್ಟು ಶಾಲೆಗೆ ಬರುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಕಲಾಂ ಅವರು ಜುಲೈ 27 ರಂದು ನಿಧನರಾದ ಬಳಿಕ ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತಾವ್ಡೆ ಅವರು ಅವರ ಜನ್ಮದಿನವನ್ನು ವಾಚನ್ ಪ್ರೇರಣಾ ದಿವಸ್ ಆಗಿ ಆಚರಿಸುವುದಾಗಿ ಘೋಷಿಸಿದ್ದರು.
ಈ ದಿನ ಬ್ಯಾಗ್ ಇಲ್ಲದೆ ಶಾಲೆಗೆ ಬರುವ ಮಕ್ಕಳಿಗೆ ಶಾಲೆಗಳು ವಿವಿಧ ಪುಸ್ತಕಗಳನ್ನು ಓದಲು ನೀಡಬೇಕು, ವಿಶ್ವದ ಖ್ಯಾತ ಕವಿಗಳ ಬಗ್ಗೆ, ಅವರ ಪುಸ್ತಕಗಳ ಬಗ್ಗೆ ಪರಿಚಯ ಮಾಡಿಕೊಡಬೇಕು. ಪುಸ್ತಕ ಪ್ರದರ್ಶನಗಳನ್ನು ಏರ್ಪಡಿಸಬೇಕು, ಪುಸ್ತಕವನ್ನು ಗಿಫ್ಟ್ ಆಗಿ ನೀಡುವ ಕಾರ್ಯಕ್ರಮವನ್ನು ಏರ್ಪಡಿಸಬೇಕು. ಪುಸ್ತಕದ ಬಗ್ಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಕಲಾಂ ಅವರು ಪ್ರೇರಣಾದಾಯಕ ವ್ಯಕ್ತಿ, ಅವರು ಬರೆದ ಪುಸ್ತಕಗಳು ವಿದ್ಯಾರ್ಥಿಗಳಿಗೆ, ಯುವಕರಿಗೆ ಮಾರ್ಗದರ್ಶಕ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸುತ್ತದೆ. ಇದಕ್ಕಾಗಿ ಒಂದು ದಿನ ’ಶಾಲಾ ಬ್ಯಾಗ್ ಇಲ್ಲದ ದಿನ’ದ ಐಡಿಯಾವನ್ನು ಮುಂದಿಟ್ಟಿದ್ದೇವೆ ಎಂದು ತಾವ್ಡೆ ಹೇಳಿದ್ದಾರೆ.
3 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.