ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪೋಲೆಂಡ್ಗೆ ಭೇಟಿ ನೀಡಿದ್ದು, ನಾಲ್ಕು ದಶಕಗಳ ನಂತರ ಭಾರತದ ಪ್ರಧಾನಿಯೊಬ್ಬರು ಮೊದಲ ಬಾರಿಗೆ ಅಲ್ಲಿಗೆ ಭೇಟಿ ನೀಡಿದ್ದಾರೆ. 1979 ರಲ್ಲಿ ಮೊರಾರ್ಜಿ ದೇಸಾಯಿ ಅವರು ಪೋಲೆಂಡ್ಗೆ ಭೇಟಿ ನೀಡಿದ ಕೊನೆಯ ಪ್ರಧಾನಿ.
ಅಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪೋಲೆಂಡ್ಗೆ ನಾಲ್ಕು ದಶಕಗಳ ಬಳಿಕ ಮೊದಲ ಬಾರಿಗೆ ಭೇಟಿ ನೀಡಿರುವುದು ಮುಖ್ಯಾಂಶದ ಸುದ್ದಿ ಎಂದು ತಮಾಷೆ ಮಾಡಿದರು. ಅಲ್ಲದೇ , ಆಸ್ಟ್ರಿಯಾಕ್ಕೆ ಇತ್ತೀಚಿನ ಭೇಟಿ ನಾಲ್ಕು ದಶಕಗಳಲ್ಲಿ ಮತ್ತೊಂದು ಮೊದಲನೆಯದ್ದಾಗಿತ್ತು ಸಭೆಗೆ ತಿಳಿಸಿದರು. ಹಲವು ಪ್ರಥಮಗಳನ್ನು ತಂದಿರುವುದು ನನ್ನ ಸೌಭಾಗ್ಯ’ ಎಂದು ನಗೆ ಚೆಲ್ಲಿದರು.
ವಿದೇಶಾಂಗ ನೀತಿಯಲ್ಲಿನ 180 ಡಿಗ್ರಿ ಬದಲಾವಣೆಯಿಂದಾಗಿ ಈ ಮೊದಲನೆಯ ಸರಮಾಲೆ ನಡೆಯುತ್ತಿದೆ ಎಂದು ಅವರು ಸೂಚಿಸಿದ್ದಾರೆ.
“ದಶಕಗಳ ಕಾಲ, ಎಲ್ಲಾ ದೇಶಗಳಿಂದ ಅಂತರವನ್ನು ಕಾಯ್ದುಕೊಳ್ಳುವುದು ಭಾರತದ ನೀತಿಯಾಗಿತ್ತು. ಆದರೆ ಪರಿಸ್ಥಿತಿ ಈಗ ಬದಲಾಗಿದೆ. ಇಂದು, ಭಾರತದ ನೀತಿಯು ಎಲ್ಲಾ ದೇಶಗಳೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಳ್ಳುವುದಾಗಿದೆ. ಇಂದಿನ ಭಾರತವು ಎಲ್ಲರೊಂದಿಗೆ ಸಂಪರ್ಕ ಹೊಂದಲು ಬಯಸುತ್ತದೆ” ಎಂದರು.
“ಇಂದಿನ ಭಾರತವು ಎಲ್ಲರೊಂದಿಗಿದೆ ಮತ್ತು ಪ್ರತಿಯೊಬ್ಬರ ಪ್ರಯೋಜನದ ಬಗ್ಗೆ ಯೋಚಿಸುತ್ತದೆ. ಇಂದು ವಿಶ್ವವು ಭಾರತವನ್ನು ವಿಶ್ವ ಬಂಧು ಎಂದು ಗೌರವಿಸುತ್ತದೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.