ಬೀಜಿಂಗ್: 13 ವರ್ಷದ ಚೀನಾದ ಬಾಲಕಿಯೊಬ್ಬಳು ಚೀನಾದಲ್ಲಿ ಭರತನಾಟ್ಯದ “ಅರಂಗೇಟ್ರಂ” ಪ್ರದರ್ಶಿಸಿ ಇತಿಹಾಸ ಬರೆದಿದ್ದಾಳೆ. ಚೀನಾದಲ್ಲಿ ಭರತನಾಟ್ಯ ಪಡೆಯುತ್ತಿರುವ ಖ್ಯಾತಿಯನ್ನು ಇದು ಪ್ರತಿಬಿಂಬಿಸಿದೆ.
ಬಾಲಕಿ ಲೀ ಮುಝಿ ಅವರು ಖ್ಯಾತ ಭರತನಾಟ್ಯ ನೃತ್ಯಗಾರ್ತಿ ಲೀಲಾ ಸ್ಯಾಮ್ಸನ್, ಭಾರತೀಯ ರಾಜತಾಂತ್ರಿಕರು ಮತ್ತು ಚೀನಾದ ದೊಡ್ಡ ಸಂಖ್ಯೆಯ ಅಭಿಮಾನಿ ಪ್ರೇಕ್ಷಕರ ಸಮ್ಮುಖದಲ್ಲಿ ಭಾನುವಾರ ರಂಗಪ್ರವೇಶ ಮಾಡಿದರು.
ಭಾರತೀಯ ಶಾಸ್ತ್ರೀಯ ಕಲೆ ಮತ್ತು ನೃತ್ಯ ಪ್ರಕಾರಗಳ ಬಗ್ಗೆ ಭಾರೀ ಅಭಿಮಾನ ಹೊಂದಿರುವ ಚೀನಿ ಅಭಿಮಾನಿಗಳಿಗೆ ಲೀ ಮುಝಿ ಅವರ ನೃತ್ಯ ರಸದೌತಣ ಉಣಬಡಿಸಿದೆ.
ಆರಂಗೇಟ್ರಂ ಎನ್ನುವುದು ಭರತನಾಟ್ಯದ ಪ್ರಮುಖ ಪ್ರಕಾರವಾಗಿದ್ದು, ಇದನ್ನು ಕಲಿತ ನಂತರವೇ ವಿದ್ಯಾರ್ಥಿಗಳಿಗೆ ಸ್ವಂತವಾಗಿ ಪ್ರದರ್ಶನ ನೀಡಲು ಅಥವಾ ಉತ್ಸಾಹಿ ನೃತ್ಯಗಾರರಿಗೆ ತರಬೇತಿ ನೀಡಲು ಅವಕಾಶ ನೀಡಲಾಗುತ್ತದೆ.
“ಇದು ಚೀನಾದ ಶಿಕ್ಷಕರಿಂದ ಸಂಪೂರ್ಣ ಭರತನಾಟ್ಯ ತರಬೇತಿ ಪಡೆದ ಮತ್ತು ಚೀನಾದಲ್ಲೇ ಪ್ರದರ್ಶನ ನೀಡಿದ ವಿದ್ಯಾರ್ಥಿಗಳ ಮೊದಲ ಅರಂಗೇಟ್ರಂ” ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಕೃತಿಯ ಉಸ್ತುವಾರಿ ವಹಿಸಿರುವ ಭಾರತೀಯ ರಾಯಭಾರ ಕಚೇರಿಯ ಮೊದಲ ಕಾರ್ಯದರ್ಶಿ ಟಿ ಎಸ್ ವಿವೇಕಾನಂದ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.