ಅಗರ್ತಾಲ: ತ್ರಿಪುರಾದ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿ ಪ್ರಚಂಡ ಜಯವನ್ನು ದಾಖಲಿಸಿದೆ. ಆಗಸ್ಟ್ 8 ರಂದು ನಡೆದ ಮೂರು ಹಂತದ ಪಂಚಾಯತ್ ಚುನಾವಣೆಯಲ್ಲಿ ಪ್ರಬಲ ಪ್ರದರ್ಶನ ನೀಡು ಮೂಲಕ ಬಿಜೆಪಿ ಹಲವಾರು ವಾರ್ಡ್ಗಳನ್ನು ಗೆದ್ದುಕೊಂಡಿದೆ. ಪಶ್ಚಿಮ ತ್ರಿಪುರಾ ಜಿಲ್ಲೆಯ ಡುಕ್ಲಿ ಗ್ರಾಮೀಣಾಭಿವೃದ್ಧಿ ಬ್ಲಾಕ್ನಲ್ಲಿ ಒಂದೆರಡು ಸ್ಥಾನಗಳನ್ನು ಹೊರತುಪಡಿಸಿ ಎಲ್ಲಾ ಸ್ಥಾನಗಳನ್ನು ಬಿಜೆಪಿ ವಶಪಡಿಸಿಕೊಂಡಿದೆ. ಕೆಲವೆಡೆ ಟಿಪ್ರಾ ಮೋಥಾ ಪಾರ್ಟಿ (ಟಿಎಂಪಿ) ಗೆದ್ದಿದೆ.
ಎಲ್ಲಾ 17 ಜಿಲ್ಲಾ ಪರಿಷತ್ಗಳು, ಪಂಚಾಯತ್ ಸಮಿತಿಗಳು ಮತ್ತು ಪಂಚಾಯತ್ ಸ್ಥಾನಗಳಲ್ಲಿ ಬಿಜೆಪಿ ಪ್ರಬಲ ಪ್ರದರ್ಶನವನ್ನು ನೀಡಿದೆ.
“ಪಶ್ಚಿಮ ತ್ರಿಪುರಾ ಜಿಲ್ಲೆಯ ಎಲ್ಲಾ ಸ್ಥಾನಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದೆ, ತ್ರಿಪ್ರ ಮೋತಾ ಪಕ್ಷವು ಗೆದ್ದಿರುವ ಡುಕ್ಲಿ ಗ್ರಾಮೀಣಾಭಿವೃದ್ಧಿ ಬ್ಲಾಕ್ನ ಒಂದು ಅಥವಾ ಎರಡು ಸ್ಥಾನಗಳನ್ನು ಹೊರತುಪಡಿಸಿ ಎಲ್ಲಾ 17 ಜಿಲ್ಲಾ ಪರಿಷತ್ತುಗಳು, ಪಂಚಾಯತ್ ಸಮಿತಿಗಳು ಮತ್ತು ಪಂಚಾಯತ್ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ” ಪಶ್ಚಿಮ ತ್ರಿಪುರದ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಶಾಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಚುನಾವಣಾ ಯಶಸ್ಸು ಈ ಪ್ರದೇಶ ಬಿಜೆಪಿಯ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಉನಕೋಟಿ ಮತ್ತು ಉತ್ತರ ತ್ರಿಪುರಾ ಜಿಲ್ಲೆಗಳಲ್ಲಿ ಇನ್ನೂ ಎಣಿಕೆ ನಡೆಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.