ನವದೆಹಲಿ: ಕೃಷಿಯಲ್ಲಿ ಸಂಶೋಧನೆ ಮತ್ತು ಆವಿಷ್ಕಾರದ ಅಗತ್ಯವನ್ನು ಪ್ರಧಾನಿ ನರೇಂದ್ರ ಮೋದಿ ಒತ್ತಿ ಹೇಳಿದ್ದಾರೆ.
ನಿನ್ನೆ ನವದೆಹಲಿಯ ಪೂಸಾದಲ್ಲಿ 109 ಹೊಸ ಬೆಳೆ ತಳಿಗಳನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಅವರು, ಈ ತಳಿಗಳು ಕೃಷಿಯಲ್ಲಿನ ನಾವೀನ್ಯತೆಯ ಮೇಲೆ ಗಮನ ಕೇಂದ್ರಿಕರಿಸಿರುವುದರ ಸ್ಪಷ್ಟ ಫಲಿತಾಂಶವಾಗಿದೆ ಎಂದರು.
ರೈತರೊಂದಿಗಿನ ಸಂವಾದದ ಸಂದರ್ಭದಲ್ಲಿ, ರೈತರು ಭೂಮಿ ತಾಯಿಯ ಬಗ್ಗೆ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ ಮತ್ತು ಸ್ವಯಂಪ್ರೇರಣೆಯಿಂದ ಕೀಟನಾಶಕಗಳಿಂದ ದೂರ ಸರಿಯುತ್ತಿದ್ದಾರೆ ಮತ್ತು ಸಾವಯವ ಕೃಷಿಯತ್ತ ಸಾಗುತ್ತಿದ್ದಾರೆ ಎಂದರು.
ರೈತರು ಹೊಸ ತಳಿಗಳನ್ನು ಅಳವಡಿಸಿಕೊಳ್ಳಲು ರೈರಿಗೆ ಸಲಹೆ ನೀಡಿದ ಮೋದಿ, ಹೊಸ ಪ್ರಭೇದವನ್ನು ಮೊದಲು ಸಣ್ಣ ವಿಭಾಗದಲ್ಲಿ ಬಳಸಬೇಕು, ಪ್ರಯೋಗದ ತೃಪ್ತಿದಾಯಕ ಫಲಿತಾಂಶಗಳ ನಂತರ ಅದನ್ನು ಸಂಪೂರ್ಣವಾಗಿ ಬಳಸಬೇಕು ಎಂದು ಸಲಹೆ ನೀಡಿದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಚಿಸಿದ ಜೈ ಜವಾನ್, ಜೈ ಕಿಸಾನ್ಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಜೈ ವಿಜ್ಞಾನವನ್ನು ಸೇರಿಸಿದ್ದನ್ನು ನೆನಪಿಸಿಕೊಂಡ ಅವರು, ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಈ ಪದಗುಚ್ಛಕ್ಕೆ ಜೈ ಅನುಸಂಧಾನವನ್ನು ಸೇರಿಸಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.