ನವದೆಹಲಿ: ಅದಾನಿ ಗ್ರೂಪ್ನ ವಿರುದ್ಧ ಶಾರ್ಟ್ ಸೆಲ್ಲರ್ ಹಿಂಡೆನ್ಬರ್ಗ್ ರಿಸರ್ಚ್ ಹಣಕಾಸು ದುರುಪಯೋಗದ ಆರೋಪಗಳನ್ನು ಮಾಡಿರುವುದಕ್ಕೆ ಸಂಬಂಧಿಸಿದಂತೆ ಆಡಳಿತ ರೂಢ ಬಿಜೆಪಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ದೇಶದಲ್ಲಿ ಆರ್ಥಿಕ ಅರಾಜಕತೆಯನ್ನು ಸೃಷ್ಟಿಸಲು ಬಯಸುತ್ತಿದೆ, ಅದಕ್ಕೆ ಸ್ಟಾಕ್ ಮಾರ್ಕೆಟ್ ಕುಸಿತವಾಗಬೇಕು ಎಂಬ ದುರುದ್ದೇಶವಿದೆ ಎಂದು ಬಿಜೆಪಿಯ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಆರ್ಥಿಕ ಅರಾಜಕತೆ ಮತ್ತು ಭಾರತದ ವಿರುದ್ಧ ದ್ವೇಷ ಸೃಷ್ಟಿಸುವುದರಲ್ಲಿ ತೊಡಗಿದೆ ಎಂದಿರುವ ಅವರು, ಭಾರತವು ಸುರಕ್ಷಿತ, ಸ್ಥಿರ ಮತ್ತು ಭರವಸೆಯ ಮಾರುಕಟ್ಟೆ ಎಂದು ಒತ್ತಿ ಹೇಳಿದರು.
“ನಮ್ಮ ಹಣಕಾಸು ಮಾರುಕಟ್ಟೆಯನ್ನು ಅಪಖ್ಯಾತಿಗೊಳಿಸಲು ಮತ್ತು ಅಸ್ಥಿರಗೊಳಿಸಲು ಮತ್ತು ದೇಶದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸಲು ಕಾಂಗ್ರೆಸ್ ವಿದೇಶಿ ಸಹಾಯವನ್ನು ಬಯಸುತ್ತಿದೆ” ಎಂದಿದ್ದಾರೆ.
“ಮೂರನೇ ಬಾರಿ ಸೋತ ನಂತರ ಕಾಂಗ್ರೆಸ್ ಮತ್ತು ಅದರ ‘ಟೂಲ್ಕಿಟ್’ ಮಿತ್ರಪಕ್ಷಗಳು ಈಗ ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ಬಯಸುತ್ತಿವೆ. ಕಾಂಗ್ರೆಸ್ ಇಂದು ಭಾರತದ ವಿರುದ್ಧ ದ್ವೇಷವನ್ನು ಬೆಳೆಸಿಕೊಂಡಿದೆ” ಎಂದು ಹೇಳಿದ್ದಾರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.