ನವದೆಹಲಿ: ಮುಂಬಯಿಯಲ್ಲಿ ಶುಕ್ರವಾರ ನಿಗಧಿಯಾಗಿದ್ದ ಪಾಕಿಸ್ಥಾನ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿಯನ್ನು ಶಿವಸೇನೆಯ ಬೆದರಿಕೆಯ ಹಿನ್ನಲೆಯಲ್ಲಿ ರದ್ದುಪಡಿಸಲಾಗಿದೆ.
ಗಡಿಯಲ್ಲಿ ಪಾಕಿಸ್ಥಾನ ಆಯೋಜಿಸುತ್ತಿರುವ ಭಯೋತ್ಪಾದನೆ ನಿಲ್ಲುವ ತನಕ ಆ ದೇಶದೊಂದಿಗೆ ಯಾವ ಸಾಂಸ್ಕೃತಿಕ ಸಂಬಂಧವನ್ನೂ ಇಟ್ಟುಕೊಳ್ಳಬಾರದು ಎಂದು ಸೇನೆ ಎಚ್ಚರಿಕೆ ನೀಡಿತ್ತು.
ಬಳಿಕ ಸಂಗೀತ ಕಛೇರಿ ಆಯೋಜಕರು ಉದ್ಧವ್ ಠಾಕ್ರೆ ಅವರೊಂದಿಗೆ ಮಾತುಕತೆ ನಡೆಸಿ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.
ಇದೀಗ ಗುಲಾಂ ಅಲಿ ಅವರನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ದೆಹಲಿಗೆ ಬಂದು ಸಂಗೀತ ಕಛೇರಿ ನಡೆಸಿಕೊಡುವಂತೆ ಆಹ್ವಾನ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಸಂಸ್ಕೃತಿ ಸಚಿವ ಕಪಿಲ್ ಮಿಶ್ರಾ, ’ಮುಂಬಯಿಯಲ್ಲಿ ಗುಲಾಂ ಅಲಿಯವರಿಗೆ ಕಾರ್ಯಕ್ರಮವನ್ನು ನಡೆಸಲು ಬಿಡಲಾಗುತ್ತಿಲ್ಲ, ಅವರನ್ನು ನಾವು ದೆಹಲಿಗೆ ಆಹ್ವಾನಿಸುತ್ತೇವೆ. ಸಂಗೀತಕ್ಕೆ ಗಡಿ ಎಂಬುದಿಲ್ಲ’ ಎಂದಿದ್ದಾರೆ.
ತನ್ನ ಕಾರ್ಯಕ್ರಮ ರದ್ದುಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಲಾಂ ಅಲಿ, ‘ನನಗೇನು ಈ ಬಗ್ಗೆ ಕೋಪವಿಲ್ಲ, ಆದರೆ ನೋವಾಗಿದೆ. ಇಂತಹ ಸನ್ನಿವೇಶಗಳು ಉದ್ಭವವಾಗಬಾರದು. ಸಂಗೀತಗಾರ ಜಗದೀಶ್ ಸಿಂಗ್ ಅವರಿಗಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದೆವು, ಆತ ನನ್ನ ದೊಡ್ಡಣ್ಣ. ಒಟ್ಟಿಗೆ ಕಾರ್ಯಕ್ರಮ ನೀಡಿದ್ದೆವು’ ಎಂದಿದ್ದಾರೆ.
ಅ.9ರಂದು ಗುಲಾಂ ಅಲಿ ಅವರ ಕಾರ್ಯಕ್ರಮ ನಿಗದಿಯಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.