ಪ್ಯಾರಿಸ್: ಭಾರತದ ಜಾವಲಿನ್ ತಾರೆ ನೀರಜ್ ಛೋಪ್ರಾ ಅವರು ತಾನೆಂದೂ ಭಾರತವನ್ನು ನಿರಾಸೆಗೊಳಿಸುವುದಿಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತಕ್ಕೆ ಚೊಚ್ಚಲ ಬೆಳ್ಳಿ ಪದಕವನ್ನು ಅವರು ತಂದುಕೊಟ್ಟಿದ್ದಾರೆ.
ಫೈನಲ್ ಪಂದ್ಯದಲ್ಲಿ ಎರಡನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 89.45 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಬೆಳ್ಳಿಗೆ ಗುರಿಯಿಟ್ಟು ಜಯಿಸಿದ್ದಾರೆ.
ಇದು ಭಾರತದ ಮೊದಲ ಬೆಳ್ಳಿ ಪದಕವಾದರೆ, ಒಟ್ಟು 5ನೇ ಪದಕವಾಗಿದೆ. 26 ವರ್ಷದ ನೀರಜ್ ಚೋಪ್ರಾ, ಮಂಗಳವಾರ ನಡೆದ ಅರ್ಹತಾ ಸುತ್ತಿನಲ್ಲಿ ಮೊದಲ ಪ್ರಯತ್ನದಲ್ಲೇ 89.34 ಮೀಟರ್ ದೂರ ಎಸೆಯುವ ಮೂಲಕ ಫೈನಲ್ಗೆ ಲಗ್ಗೆಯಿಟ್ಟಿದ್ದರು.
ಬಂಗಾರದ ಪದಕ ಪಾಕಿಸ್ಥಾನದ ಆಟಗಾರ ಅರ್ಷದ್ ನದೀಂ ಅವರ ಪಾಲಾಗಿದೆ. ಅರ್ಷದ್ ನದೀಮ್ ತಮ್ಮ 2ನೇ ಪ್ರಯತ್ನದ ಕೊನೆಯ ಎಸೆತದಲ್ಲಿ 84.47 ಮೀಟರ್ ಗಳಿಗೆ ಭರ್ಜಿ ಎಸೆದು, ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಫೈನಲ್ ನಲ್ಲಿ 12 ದೇಶಗಳ ಕ್ರೀಡಾಪಟುಗಳು ಸ್ಪರ್ಧಿಸಿದ್ದರು.
ರಜತ ಪದಕ ದೊರಕಿಸಿಕೊಟ್ಟ ನೀರಜ್ ಛೋಪ್ರಾ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದು, “ನೀರಜ್ ಚೋಪ್ರಾ ಒಬ್ಬ ಉತ್ಕೃಷ್ಟ ಆಟಗಾರ! ಪದೇ ಪದೇ, ಅವರು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಿದ್ದಾರೆ. ಅವರು ಮತ್ತೊಂದು ಒಲಿಂಪಿಕ್ ಯಶಸ್ಸಿನೊಂದಿಗೆ ಮರಳಿದ್ದಾರೆ ಎಂಬ ಬಗ್ಗೆ ಭಾರತವು ಹೆಮ್ಮೆ ಪಡುತ್ತದೆ. ಬೆಳ್ಳಿ ಗೆದ್ದಿದ್ದಕ್ಕಾಗಿ ಅವರಿಗೆ ಅಭಿನಂದನೆಗಳು. ಅವರು ಅಸಂಖ್ಯಾತ ಮುಂಬರುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದ್ದಾರೆ” ಎಂದಿದ್ದಾರೆ.
Neeraj Chopra is excellence personified! Time and again he’s shown his brilliance. India is elated that he comes back with yet another Olympic success. Congratulations to him on winning the Silver. He will continue to motivate countless upcoming athletes to pursue their dreams… pic.twitter.com/XIjfeDDSeb
— Narendra Modi (@narendramodi) August 8, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.