ನವದೆಹಲಿ: ಕೇಂದ್ರದ ಮೀನುಗಾರಿಕೆ ಇಲಾಖೆಯ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ) ಅಡಿಯಲ್ಲಿನ ವಿಮಾ ಯೋಜನೆಗೆ 131.3 ಲಕ್ಷ ಮೀನುಗಾರರು ಒಳಪಟ್ಟಿದ್ದಾರೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಬುಧವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಮತ್ಸ್ಯ ಸಂಪದ ಯೋಜನೆಯು ಅಪಘಾತ ವಿಮಾ ಯೋಜನೆಯನ್ನು ಒದಗಿಸುತ್ತದೆ. ಇದರಲ್ಲಿ ಸಂಪೂರ್ಣ ವಿಮಾ ಪ್ರೀಮಿಯಂ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಭರಿಸುತ್ತವೆ, ಫಲಾನುಭವಿಯು ಯಾವುದೇ ಕೊಡುಗೆಯನ್ನು ನೀಡಬೇಕಾಗಿಲ್ಲ.
ಗ್ರೂಪ್ ಆಕ್ಸಿಡೆಂಟಲ್ ಇನ್ಶೂರೆನ್ಸ್ ಸ್ಕೀಮ್ (GAIS) ಅಡಿಯಲ್ಲಿ ಒದಗಿಸಲಾದ ವಿಮಾ ರಕ್ಷಣೆಯು ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ರೂ 5,00,000 ಮತ್ತು ಶಾಶ್ವತ ಭಾಗಶಃ ಅಂಗ ವೈಕಲ್ಯಕ್ಕೆ ರೂ 2,50,000 ಒಳಗೊಂಡಿರುತ್ತದೆ. ಈ ಯೋಜನೆಯು ಅಪಘಾತದ ಸಂದರ್ಭದಲ್ಲಿ ರೂ 25,000 ಮೊತ್ತದ ಆಸ್ಪತ್ರೆಯ ವೆಚ್ಚವನ್ನು ಸಹ ಒಳಗೊಂಡಿದೆ.
2018-19 ನೇ ಸಾಲಿನಲ್ಲಿ ಸರ್ಕಾರವು ಮೀನುಗಾರರಿಗೆ ಅವರ ದುಡಿಯುವ ಬಂಡವಾಳದ ಅವಶ್ಯಕತೆಗಳನ್ನು ಪೂರೈಸಲು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸೌಲಭ್ಯವನ್ನು ವಿಸ್ತರಿಸಿದೆ ಎಂದು ಅವರು ಹೇಳಿದರು.
“ಇಂದಿನವರೆಗೆ, ಎಲ್ಲಾ ರಾಜ್ಯಗಳ ಮೀನುಗಾರರಿಗೆ 4,26,666 ಕಿಸಾನ್ ಕ್ರೆಡಿಟ್ ಕಾರ್ಡ್ ಮಂಜೂರು ಮಾಡಲಾಗಿದೆ” ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.