ನವದೆಹಲಿ: ಜಲ ಜೀವನ್ ಮಿಷನ್ – ಹರ್ ಘರ್ ಜಲ್ ಯೋಜನೆಯು ಆಗಸ್ಟ್ 2019 ರಲ್ಲಿ ಪ್ರಾರಂಭವಾಗಿ, ಐದು ವರ್ಷಗಳಲ್ಲಿ 11.8 ಕೋಟಿ ಗ್ರಾಮೀಣ ಕುಟುಂಬಗಳಿಗೆ ಪೈಪ್ಲೈನ್ ನೀರಿನ ಸಂಪರ್ಕವನ್ನು ಒದಗಿಸಿದೆ.
ಯೋಜನೆಯನ್ನು ಪ್ರಾರಂಭಿಸಿದಾಗ, ಕೇವಲ 3.23 ಕೋಟಿ (ಶೇ. 16.8) ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕಗಳನ್ನು ಹೊಂದಿದ್ದವು. ಈ ಸಂಖ್ಯೆ ಈಗ 15.03 ಕೋಟಿ ಅಂದರೆ 77.83 ಪ್ರತಿಶತ ಕುಟುಂಬಗಳಿಗೆ ತಲುಪಿದೆ.
ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್, ಗೋವಾ, ತೆಲಂಗಾಣ, ಅರುಣಾಚಲ ಪ್ರದೇಶ ಮತ್ತು ಮಿಜೋರಾಂನಂತಹ ರಾಜ್ಯಗಳು 100 ಪ್ರತಿಶತದಷ್ಟು ವ್ಯಾಪ್ತಿಯೊಂದಿಗೆ ‘ಹರ್ ಘರ್ ಜಲ್’ ರಾಜ್ಯಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿವೆ.
ಅಂತೆಯೇ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೂಡ ಪೈಪ್ಲೈನ್ ನೀರಿನ 100 ಪ್ರತಿಶತ ವ್ಯಾಪ್ತಿಯನ್ನು ಸಾಧಿಸಿವೆ.
ನೀರು ಸರಬರಾಜಿನ ಜೊತೆಗೆ ನೀರಿನ ಗುಣಮಟ್ಟದ ಬಗ್ಗೆಯೂ ನಿಗಾ ಇಡಲಾಗಿದೆ. 316 ಆರ್ಸೆನಿಕ್ ಮತ್ತು 265 ಫ್ಲೋರೈಡ್ ಪೀಡಿತ ಗ್ರಾಮೀಣ ವಸತಿಗಳಿಗೆ ಪ್ರತ್ಯೇಕ ನಿಬಂಧನೆಯನ್ನು ಮಾಡಲಾಗಿದೆ.
2.31 ಲಕ್ಷ ಗ್ರಾಮಗಳು ಶೇ 100 ರಷ್ಟು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ. ಅವುಗಳಲ್ಲಿ ಸುಮಾರು 1.28 ಲಕ್ಷ ಗ್ರಾಮಗಳು ಆಯಾ ಗ್ರಾಮ ಸಭೆಯಿಂದ ಪ್ರಮಾಣೀಕರಿಸಲ್ಪಟ್ಟಿವೆ.
ಅತಿ ಹೆಚ್ಚು ‘ಹರ್ ಘರ್ ಜಲ್’ ಪ್ರಮಾಣೀಕೃತ ಗ್ರಾಮಗಳು ಉತ್ತರ ಪ್ರದೇಶದಲ್ಲಿವೆ, ನಂತರ ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಿವೆ. ತೆಲಂಗಾಣವು ಯಾವುದೇ ಪ್ರಮಾಣೀಕೃತ ಗ್ರಾಮವನ್ನು ಹೊಂದಿಲ್ಲ, ಬಿಹಾರವು ಒಂದೇ ಒಂದು ಗ್ರಾಮವನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.