ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಮಣಿಪುರ ರಾಜ್ಯದಲ್ಲಿ ಸುಮಾರು 10,675 ಅಕ್ರಮ ವಲಸಿಗರನ್ನು ಪತ್ತೆಹಚ್ಚಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಈ ಅಕ್ರಮ ವಲಸಿಗರ ಮ್ಯಾನ್ಮಾರ್, ಬಾಂಗ್ಲಾದೇಶ, ನಾರ್ವೆ, ಚೀನಾ ಮತ್ತು ನೇಪಾಳಕ್ಕೆ ಸೇರಿದವರು ಎಂದು ಶುಕ್ರವಾರ ಮಣಿಪುರ ವಿಧಾನಸಭೆಯ ಆರನೇ ಅಧಿವೇಶನದಲ್ಲಿ ಶಾಸಕ ಸುರ್ಜಾಕುಮಾರ್ ಒಕ್ರಾಮ್ ಅವರ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭದಲ್ಲಿ ಬೀರೆನ್ ಸಿಂಗ್ ಹೇಳಿದ್ದಾರೆ.
ಒಟ್ಟು 10,675 ಅಕ್ರಮ ವಲಸಿಗರ ಪೈಕಿ 85 ಮಂದಿಯನ್ನು ಕಳೆದ ಐದು ವರ್ಷಗಳಲ್ಲಿ ಗಡಿಪಾರು ಮಾಡಲಾಗಿದೆ, ಪ್ರಸ್ತುತ 143 ಅಕ್ರಮ ವಲಸಿಗರನ್ನು ಬಂಧನ ಕೇಂದ್ರಗಳಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.
ಬಂಧನ ಕೇಂದ್ರಗಳಲ್ಲಿ ಬಂಧಿತರನ್ನು ಸರಿಯಾಗಿ ನೋಡಿಕೊಳ್ಳಲು 85,55,761 ರೂ ವೆಚ್ಚ ಮಾಡಲಾಗಿದೆ ಎಂದರು.
ಗೃಹ ಇಲಾಖೆಯ ಮೇಲ್ವಿಚಾರಣೆಯಲ್ಲಿ ಮಣಿಪುರ ಸರ್ಕಾರದ ಆದೇಶದ ಅನ್ವಯ ಮಾರ್ಚ್ 24, 2023ರಿಂದ ಚುರಾಚಂದ್ಪುರ, ಚಾಂಡೆಲ್, ತೆಂಗ್ನೌಪಾಲ್, ಕಾಮ್ಜಾಂಗ್ ಮತ್ತು ಫರ್ಜಾಲ್ ಜಿಲ್ಲೆಗಳಲ್ಲಿ ಅಕ್ರಮ ವಲಸಿಗರ ಗುರುತಿಸುವಿಕೆಗಾಗಿ ಪರಿಶೀಲನಾ ಅಭಿಯಾನವನ್ನು ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.