ನವದೆಹಲಿ: ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆ, INS ಶಾಲ್ಕಿ ಇಂದು ಕೊಲಂಬೊ ಬಂದರಿಗೆ ತೆರಳಿದ್ದು, ಅಲ್ಲಿ ಎರಡು ದಿನಗಳ ಕಾಲ ನೆಲೆಸಲಿದೆ. ಜಲಾಂತರ್ಗಾಮಿ ನೌಕೆಯನ್ನು ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ವಿಧ್ಯುಕ್ತವಾಗಿ ಬರಮಾಡಿಕೊಂಡರು.
ಕೊಲಂಬೋ ಬಂದಿರನಲ್ಲಿ ಇರುವವರೆಗೆ ಶಾಲ್ಕಿಗೆ ಶ್ರೀಲಂಕಾ ನೌಕಾಪಡೆಯ ಸುಮಾರು 50 ಸಿಬ್ಬಂದಿ ಭೇಟಿ ನೀಡಲಿದ್ದಾರೆ. ಅಲ್ಲಿ ಅವರಿಗೆ ಜಲಾಂತರ್ಗಾಮಿ ನೌಕೆಯ ಬಗ್ಗೆ ಭಾರತೀಯ ನೌಕಾ ಅಧಿಕಾರಿಗಳು ವಿವರಗಳನ್ನು ನೀಡಲಿದ್ದಾರೆ, ಶಾಲ್ಕಿಯ ವಿಶೇಷತೆಗಳನ್ನು ಬಣ್ಣಿಸಲಿದ್ದಾರೆ.
ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಮತ್ತು ಶ್ರೀಲಂಕಾ ರಕ್ಷಣಾ ಪಡೆಗಳ ಸಿಬ್ಬಂದಿ ಕೂಡ ಜಲಾಂತರ್ಗಾಮಿ ನೌಕೆಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ.
INS ಶಾಲ್ಕಿ ಶಿಶುಮಾರ್ ವರ್ಗದ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿಯಾಗಿದ್ದು, 7 ಫೆಬ್ರವರಿ 1992 ರಂದು ಭಾರತೀಯ ನೌಕಾಪಡೆಗೆ ನಿಯೋಜಿಸಲಾಗಿದೆ. ಭಾರತದಲ್ಲಿ ನಿರ್ಮಿಸಲಾದ ಮೊದಲ ಜಲಾಂತರ್ಗಾಮಿ ಇದಾಗಿದೆ. ಹಿಂದೆ, ಕಲ್ವೇರಿ ವರ್ಗದ ಜಲಾಂತರ್ಗಾಮಿ INS ಕರಾಜ್ ಫೆಬ್ರವರಿ 2024 ರಲ್ಲಿ ಕೊಲಂಬೊಗೆ ಭೇಟಿ ನೀಡಿತು ಮತ್ತು ಜೂನ್ 2023 ರಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಸಂಬಂಧಿಸಿದಂತೆ INS ವಗೀರ್ಹಾಡ್ ಕೊಲಂಬೊಗೆ ಭೇಟಿ ನೀಡಿತು.
ಶಾಲ್ಕಿ ತನ್ನ ಭೇಟಿಯ ವೇಳೆ ಕೊಲಂಬೊದಲ್ಲಿ ಇಂಧನಗಳನ್ನು ಮರುಪೂರಣಗೊಳಿಸುತ್ತದೆ. ಇದರ ಸಿಬ್ಬಂದಿ ಶ್ರೀಲಂಕಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ಹೊಂದಿದ್ದಾರೆ. ಜಲಾಂತರ್ಗಾಮಿ ನೌಕೆಯು ಆಗಸ್ಟ್ 4 ರಂದು ದ್ವೀಪದಿಂದ ನಿರ್ಗಮಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.