ನವದೆಹಲಿ: ಮೈಕ್ರೋಸಾಫ್ಟ್ ಸೇವೆಗಳ ಸ್ಥಗಿತದಿಂದ ಭಾರತೀಯ ಹಣಕಾಸು ಮತ್ತು ಪಾವತಿ ವ್ಯವಸ್ಥೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೇಳಿದೆ. ಈಗಾಗಲೇ ಅದು ತನ್ನ ನಿಯಂತ್ರಣದಲ್ಲಿರುವ ಘಟಕಗಳ ಮೇಲೆ ಸ್ಥಗಿತದ ಪರಿಣಾಮಗಳ ಬಗ್ಗೆ ಮೌಲ್ಯಮಾಪನ ಮಾಡಿದೆ.
ಕೇವಲ 10 ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳು ಸಣ್ಣ ಅಡೆತಡೆಗಳನ್ನು ಎದುರಿಸಿದ್ದವು ಮತ್ತು ಅವುಗಳನ್ನು ಪರಿಹರಿಸಲಾಗಿದೆ ಅಥವಾ ಪರಿಹರಿಸಲಾಗುತ್ತಿದೆ ಎಂದು ಆರ್ಬಿಐ ಹೇಲಿದೆ.
ಒಟ್ಟಾರೆಯಾಗಿ, ರಿಸರ್ವ್ ಬ್ಯಾಂಕ್ನ ಡೊಮೇನ್ನಲ್ಲಿರುವ ಭಾರತೀಯ ಹಣಕಾಸು ವಲಯವು ಜಾಗತಿಕ ನಿಲುಗಡೆಯಿಂದ ಹೆಚ್ಚಿನ ತೊಂದರೆ ಅನುಭವಿಸಿಲ್ಲ. ಹೆಚ್ಚಿನ ಬ್ಯಾಂಕ್ಗಳ ನಿರ್ಣಾಯಕ ವ್ಯವಸ್ಥೆಗಳು ಕ್ಲೌಡ್ನಲ್ಲಿಲ್ಲ ಮತ್ತು ಕೆಲವು ಬ್ಯಾಂಕ್ಗಳು ಮಾತ್ರ ಕ್ರೌಡ್ಸ್ಟ್ರೈಕ್ ಉಪಕರಣವನ್ನು ಬಳಸುತ್ತಿವೆ ಎಂದು ಆರ್ಬಿಐ ಹೇಳಿದೆ.
ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಮುಖ್ಯ ಕಾರ್ಯನಿರ್ವಾಹಕ ದಿಲೀಪ್ ಅಸ್ಬೆ ಮಾತನಾಡಿ, ವ್ಯಾಪಕವಾಗಿ ಜನಪ್ರಿಯವಾಗಿರುವ ಏಕೀಕೃತ ಪಾವತಿಗಳ ಇಂಟರ್ಫೇಸ್ ಸೇರಿದಂತೆ ದೇಶದ ಪಾವತಿಗಳ ಮೇಲೆ ಜಾಗತಿಕ ನಿಲುಗಡೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಅಲ್ಲದೇ ಜಾಗರೂಕರಾಗಿರಲು ಮತ್ತು ಕಾರ್ಯಾಚರಣೆಯ ಸ್ಥಿತಿಸ್ಥಾಪಕತ್ವ ಮತ್ತು ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲಾ ನಿಯಂತ್ರಿತ ಘಟಕಗಳಿಗೆ ಸಲಹೆಯನ್ನು ನೀಡಿದ್ದೇವೆ ಎಂದು ಆರ್ಬಿಐ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.