ನವದೆಹಲಿ: ವಾಹನ ತಯಾರಕರು, ವಿಶೇಷವಾಗಿ ಕಾರು ತಯಾರಕರು 2017ರಿಂದ ವಾಹನ ಸುರಕ್ಷತೆಗಾಗಿ ಉತ್ತಮ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಪಾಲಿಸುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬೃಹತ್ ಕೈಗಾರಿಕಾ ಕಾರ್ಯದರ್ಶಿ ರಾಜನ್ ಕಟೋಚ್ ಹೇಳಿದ್ದಾರೆ.
ವಾಹನ ತಯಾರಕ ಕೈಗಾರಿಕೆಗಳಿಗೆ ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಗೆ ಅತ್ಯುತ್ತಮ ಗುಣಮಟ್ಟ ನೀಡುವುದು ಕಷ್ಟದ ವಿಷಯ. ಭಾರತದಲ್ಲಿ 2017ರ ಒಳಗಾಗಿ ವಾಹನಗಳ ಮುಂಭಾಗ ಮತ್ತು ಸೈಡ್ ಕ್ರ್ಯಾಶ್ ಸೇರಿದಂತೆ ಎಲ್ಲಾ ಸುರಕ್ಷತಾ ಪರೀಕ್ಷೆಗಳನ್ನು ನಿರ್ವಹಿಸಲು 7 ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮುಂಬರುವ 2017ರ ಅಕ್ಟೋಬರ್ ನಂತರ ತಯಾರಿಸಲಾಗುವ ಎಲ್ಲಾ ಕಾರುಗಳು ಕ್ರ್ಯಾಶ್ ಪರೀಕ್ಷೆ ಅಲ್ಲದೇ ಸುರಕ್ಷತೆಯ ನಿಟ್ಟಿನಲ್ಲಿ ಏರ್ ಬ್ಯಾಗ್ಗಳನ್ನೂ ಹೊಂದುವುದು ಅಗತ್ಯ. ಇದಲ್ಲದೇ ರಸ್ತೆ ಸಾರಿಗೆ ಸಚಿವಾಲಯವು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ನ್ನು ಕಡ್ಡಾಯವಾಗಿ ಬಳಕೆ ಮಾಡುವ ನಿಯಮವನ್ನು ರೂಪಿಸಲು ಮುಂದಾಗಿದೆ.
ಪರೀಕ್ಷಾ ಕೇಂದ್ರಗಳು ಕಾರ್ಯಾಚರಣೆ ಆರಂಭಿಸಿದ ಬಳಿಕ ವಾಹನ ತಯಾರಕರು ಕಡ್ಡಾಯ ಪರೀಕ್ಷೆಗಳನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಎಂದು ಕಟೋಚ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.