ನವದೆಹಲಿ: ಚೀನಾ ವಿಷಯದಲ್ಲೆ ತಜ್ಞರೆಂದು ಪರಿಗಣಿಸಲ್ಪಟ್ಟಿರುವ ಅನುಭವಿ ರಾಜತಾಂತ್ರಿಕ ವಿಕ್ರಮ್ ಮಿಶ್ರಿ ಅವರು ಸೋಮವಾರ ಭಾರತದ ನೂತನ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.
1989-ಬ್ಯಾಚ್ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿರುವ ಮಿಶ್ರಿ ಅವರು ವಿನಯ್ ಕ್ವಾತ್ರಾ ಅವರ ಉತ್ತರಾಧಿಕಾರಿಯಾಗಿದ್ದಾರೆ. ಭಾರತವು ವಿವಿಧ ವಿದೇಶಾಂಗ ನೀತಿ ಸವಾಲುಗಳನ್ನು ಮೆಟ್ಟಿ ನಿಲ್ಲಲು ಎದುರು ನೋಡುತ್ತಿರುವ ಸಮಯದಲ್ಲಿ ಮಿಸ್ರಿ ಅವರು ಪ್ರಮುಖ ಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ.
“ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇಂದು ತಮ್ಮ ಹೊಸ ಜವಾಬ್ದಾರಿಯನ್ನು ಸ್ವೀಕರಿಸುತ್ತಿರುವಾಗ ಅವರನ್ನು ಅಭಿನಂದಿಸುತ್ತೇನೆ. ಅವರಿಗೆ ಉತ್ಪಾದಕ ಮತ್ತು ಯಶಸ್ವಿ ಅಧಿಕಾರಾವಧಿಯನ್ನು ಹಾರೈಸುತ್ತೇನೆ” ಎಂದು ವಿದೇಶಾಂಗ ಸಚಿವ ಜೈಶಂಕರ್ X ನಲ್ಲಿ ಬರೆದಿದ್ದಾರೆ.
ಇನ್ನೊಂದೆಡೆ ಮಾಜಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರ ಸಮರ್ಪಣೆ ಮತ್ತು ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆ ಕ್ಷೇತ್ರದಲ್ಲಿ ಅನೇಕ ಕೊಡುಗೆಗಳಿಗಾಗಿ ಜೈಶಂಕರ್ ಧನ್ಯವಾದಗಳನ್ನು ಅರ್ಪಿಸಿದರು. ಕ್ವಾತ್ರಾ, ವಿಶೇಷವಾಗಿ ಕಳೆದ ದಶಕದಲ್ಲಿ, ಹಲವು ಪ್ರಮುಖ ನೀತಿಗಳನ್ನು ಕಾರ್ಯತಂತ್ರ ರೂಪಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡಿದ್ದಾರೆ. ಅವರ ಮುಂದಿನ ಪ್ರಯತ್ನಗಳಲ್ಲಿ ಅವರಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
https://x.com/DrSJaishankar/status/1812727311671718351?ref_src=twsrc%5Etfw%7Ctwcamp%5Etweetembed%7Ctwterm%5E1812727311671718351%7Ctwgr%5Ed646e6a575162a04ce3aa59d39001317738b05cf%7Ctwcon%5Es1_&ref_url=https%3A%2F%2Fwww.indiatvnews.com%2Fnews%2Fworld%2Fvikram-misri-who-served-private-secretary-to-three-prime-ministers-takes-charge-as-india-new-foreign-secretary-china-2024-07-15-941856
Thank outgoing Foreign Secretary Vinay Kwatra for his dedication and many contributions in the field of foreign policy and national security.
Particularly in the last decade,he has helped strategize and execute so many of our key policies.
Wish him well in his future endeavors. pic.twitter.com/5Ixf4YLcbU
— Dr. S. Jaishankar (@DrSJaishankar) July 14, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.