ಚಂಡೀಗಢ: ಈ ವರ್ಷದ ಮೊದಲ ಆರು ತಿಂಗಳಲ್ಲಿ 126 ಡ್ರೋನ್ಗಳು ಮತ್ತು 150 ಕೆಜಿ ಹೆರಾಯಿನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ವಶಪಡಿಸಿಕೊಂಡಿದೆ, ಈ ಮೂಲಕ ತನ್ನ ಹಿಂದಿನ ವರ್ಷದ ದಾಖಲೆಯನ್ನು ಗಮನಾರ್ಹವಾಗಿ ಮೀರಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಎಸ್ಎಫ್ ಪಂಜಾಬ್ನಲ್ಲಿ 553-ಕಿಮೀ ಉದ್ದದ ವೈವಿಧ್ಯಮಯ, ಕಠಿಣ ಮತ್ತು ಸವಾಲಿನ ಭಾರತ-ಪಾಕಿಸ್ತಾನ ಗಡಿಯನ್ನು ಕಾವಲು ಕಾಯುತ್ತದೆ. 2023 ರಲ್ಲಿ, ಪಂಜಾಬ್ನ ಗಡಿಯಲ್ಲಿ ನಿಯೋಜಿತಗೊಂಡ ಬಿಎಸ್ಎಫ್ ಪಾಕಿಸ್ತಾನದಿಂದ ಬರುತ್ತಿದ್ದ 107 ಡ್ರೋನ್ಗಳು ಅಥವಾ ಯುಎವಿಗಳನ್ನು ವಶಪಡಿಸಿಕೊಂಡಿದೆ. ಆದರೆ, ಈ ವರ್ಷ ಕೇವಲ ಆರು ತಿಂಗಳ ಅವಧಿಯಲ್ಲಿ ಬಿಎಸ್ಎಫ್ ಈಗಾಗಲೇ 126 ಡ್ರೋನ್ಗಳು ಅಥವಾ UAV ಗಳನ್ನು ವಶಪಡಿಸಿಕೊಂಡಿದೆ.
ಹೊಸ ಬೆದರಿಕೆಗಳನ್ನು ಗುರುತಿಸುವಲ್ಲಿ ಮತ್ತು ತಟಸ್ಥಗೊಳಿಸುವಲ್ಲಿ ಬಿಎಸ್ಎಫ್ ಪಡೆಗಳ ವರ್ಧಿತ ಸಾಮರ್ಥ್ಯ ಮತ್ತು ಹೊಂದಾಣಿಕೆಯನ್ನು ಇದು ಎತ್ತಿ ತೋರಿಸುತ್ತದೆ, ಈ ಕಾರ್ಯವು ಕೆಲವೇ ವರ್ಷಗಳ ಹಿಂದೆ ಹೆಚ್ಚು ಸವಾಲಿನದ್ದಾಗಿತ್ತು, ಆದರೀಗ ಶತ್ರುಗಳ ತಂತ್ರಗಾರಿಕೆಗೆ ಪ್ರತಿ ತಂತ್ರಗಾರಿಕೆ ಹೆಣೆದು ಬಿಎಸ್ಎಫ್ ಗರಿಯನ್ನು ಭದ್ರಗೊಳಿಸುತ್ತಿದೆ.
𝐁𝐒𝐅 𝐏𝐮𝐧𝐣𝐚𝐛 𝐑𝐞𝐜𝐨𝐯𝐞𝐫𝐬 𝟏𝟐𝟔 𝐃𝐫𝐨𝐧𝐞𝐬 𝐚𝐧𝐝 𝟏𝟓𝟎 𝐊𝐠 𝐨𝐟 𝐇𝐞𝐫𝐨𝐢𝐧 𝐢𝐧 𝟔 𝐌𝐨𝐧𝐭𝐡𝐬
In a remarkable achievement, the troops of @BSF_Punjab have significantly outperformed their previous year's record in just the first six months of this year. In… pic.twitter.com/aGd9XUpvlu
— BSF PUNJAB FRONTIER (@BSF_Punjab) July 10, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.