ಚೆನ್ನೈ: ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ಎಂ ರೋಹಿಣಿ ಜೆಇಇ ಮೇನ್ಸ್ನಲ್ಲಿ ಶೇಕಡಾ 73.8 ಅಂಕಗಳನ್ನು ಗಳಿಸುವ ಮೂಲಕ ತಿರುಚ್ಚಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಗೆ ಪ್ರವೇಶ ಪಡೆದ ಮೊದಲ ಬುಡಕಟ್ಟು ವಿದ್ಯಾರ್ಥಿಯಾಗಿ ಹೊರಹೊಮ್ಮಿದ್ದಾಳೆ.
ರೋಹಿಣಿಗೆ ತಿರುಚ್ಚಿ ಎನ್ಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸೀಟು ಸಿಕ್ಕಿದೆ. “ನಾನು ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿಯಾಗಿದ್ದು, ಬುಡಕಟ್ಟು ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ನಾನು ಜೆಇಇ ಪರೀಕ್ಷೆಯಲ್ಲಿ ಭಾಗವಹಿಸಿ ಶೇಕಡಾ 73.8 ಗಳಿಸಿದ್ದೇನೆ. ನಾನು ಎನ್ಐಟಿ ತಿರುಚ್ಚಿಯಲ್ಲಿ ಸೀಟು ಪಡೆದುಕೊಂಡಿದ್ದೇನೆ ಮತ್ತು ಕೆಮಿಕಲ್ ಇಂಜಿನಿಯರಿಂಗ್ ಆಯ್ಕೆ ಮಾಡಿಕೊಂಡಿದ್ದೇನೆ” ಎಂದು ರೋಹಿಣಿ ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ.
ಅಲ್ಲದೇ ತನ್ನ ಶೈಕ್ಷಣಿಕ ಪಯಣದಲ್ಲಿ ಸಹಾಯ ಮತ್ತು ಬೆಂಬಲ ನೀಡಿದ ತನ್ನ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾಳೆ. ತಮಿಳುನಾಡು ರಾಜ್ಯ ಸರ್ಕಾರ ತನ್ನ ಶುಲ್ಕವನ್ನು ಪಾವತಿಸಲು ಮುಂದಾಗಿದೆ ಎಂದಿರುವ ಆಕೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ.
ನನ್ನ ಎಲ್ಲಾ ಶುಲ್ಕವನ್ನು ಪಾವತಿಸಲು ತಮಿಳುನಾಡು ರಾಜ್ಯ ಸರ್ಕಾರ ಮುಂದಾಗಿದೆ, ನನಗೆ ಸಹಾಯ ಮಾಡಿದ್ದಕ್ಕಾಗಿ ನಾನು ಸಿಎಂಗೆ ಧನ್ಯವಾದ ಹೇಳುತ್ತೇನೆ. ನನ್ನ ಮುಖ್ಯೋಪಾಧ್ಯಾಯರು ಮತ್ತು ನನ್ನ ಶಾಲೆಯ ಸಿಬ್ಬಂದಿಯಿಂದಾಗಿ ನಾನು ಉತ್ತಮ ಅಂಕ ಪಡೆಯಳು ಸಾಧ್ಯವಾಯಿತು ಎಂದಿದ್ದಾಳೆ.
#WATCH | Tiruchirappalli, Tamil Nadu: Rohini, a girl belonging to a tribal community clears the JEE exam and will join the National Institute of Technology, Trichy. pic.twitter.com/gmhlN5CZdd
— ANI (@ANI) July 9, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.