ನವದೆಹಲಿ: ಸಿಯಾಚಿನ್ನಲ್ಲಿ ಬೆಂಕಿ ಅವಘಡದಿಂದ ತನ್ನ ಸಹ ಸೈನಿಕರನ್ನು ರಕ್ಷಿಸುವ ವೇಳೆ ಮಡಿದ ಕ್ಯಾಪ್ಟನ್ ಅಂಶುಮಾನ್ ಸಿಂಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶುಕ್ರವಾರ ಕೀರ್ತಿ ಚಕ್ರವನ್ನು ಪ್ರದಾನ ಮಾಡಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಂಗ್ ಅವ ಪತ್ನಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೀರ್ತಿ ಚಕ್ರವು ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ.
ವಿಡಿಯೋ ಕ್ಲಿಪ್ನಲ್ಲಿ, ಸಮಾರಂಭದಲ್ಲಿ ಸ್ಮೃತಿ ಸಿಂಗ್ ಮತ್ತು ಕ್ಯಾಪ್ಟನ್ ಸಿಂಗ್ ಅವರ ತಾಯಿ ರಾಷ್ಟ್ರಗಳ ಮುಂದೆ ನಿಂತು ಪ್ರಶಸ್ತಿ ಸ್ವೀಕರಿಸುವುದನ್ನು ಕಾಣಬಹುದು. ತನ್ನ ದಿವಂಗತ ಪತಿಯ ಕೆಚ್ಚೆದೆಯ ತ್ಯಾಗವನ್ನು ನೆನಪಿಸಿಕೊಂಡು ಸ್ಮೃತಿ ಅವರ ಕಣ್ಣಾಲೆ ಒದ್ದೆಯಾಗಿತು. ಬಿಳಿ ಬಟ್ಟೆಯನ್ನು ಧರಿಸಿ ರಾಷ್ಟ್ರಪತಿಗಳಿಗೆ ನಮಿಸಿ ಆಕೆ ಪ್ರಶಸ್ತಿ ಸ್ವೀಕರಿಸಿದ್ದಾಳೆ
“ತಮ್ಮ ಸುರಕ್ಷತೆಯನ್ನು ಕಡೆಗಣಿಸಿ, ಅಂಶುಮಾನ್ ಸಿಂಗ್ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದರು ಮತ್ತು ಬೆಂಕಿ ಘಟನೆಯಲ್ಲಿ ಅನೇಕ ಜನರನ್ನು ರಕ್ಷಿಸಲು ನಿರ್ಧರಿಸಿದರು” ಎಂದು ರಾಷ್ಟ್ರಪತಿ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸುವಾಗ ಅಸಾಧಾರಣ ಶಕ್ತಿ ಮತ್ತು ದೃಢತೆಯನ್ನು ಪ್ರದರ್ಶಿಸಿದ ಸ್ಮೃತಿ ಅವರ ಬಗ್ಗೆ ಶ್ಲಾಘನೆಗಳು ವ್ಯಕ್ತವಾಗಿದೆ.
President Droupadi Murmu presents the Kirti Chakra (Posthumous) to Captain Anshuman Singh. #DefenceInvestitureCeremony @rashtrapatibhvn pic.twitter.com/CpWRHRjJbs
— Doordarshan National दूरदर्शन नेशनल (@DDNational) July 5, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.