ನವದೆಹಲಿ: ಎಲ್ಲಾ ಸಸ್ಪೆನ್ಸ್ಗೆ ಅಂತ್ಯ ಹಾಡಿರುವ ಬಿಜೆಪಿ ಮಂಗಳವಾರ ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಂಝಿ ಅವರನ್ನು ಘೋಷಿಸಿದೆ. ಕಿಯೋಂಜಾರ್ನ ಶಾಸಕರಾಗಿರುವ ಮಾಂಝಿ ಅವರು ಒಡಿಶಾ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿದ್ದರು.
52 ವರ್ಷದ ಮೋಹನ್ ಚರಣ್ ಮಾಂಝಿ ಬುಡಕಟ್ಟು ಸಮುದಾಯದಿಂದ ಬಂದವರು. ಅವರು ಕಿಯೋಂಜಾರ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಜನವರಿ 6, 1972 ರಂದು ಜನಿಸಿದ ಅವರು, ಬಿಎ ಪದವಿ ಹೊಂದಿದ್ದಾರೆ. ಅಧಿಕೃತ ದಾಖಲೆಗಳು ಅವರ ವೃತ್ತಿಯನ್ನು “ಕೃಷಿಕ” ಎಂದು ತೋರಿಸುತ್ತವೆ. ಹಿಂದೆ ಫುಟ್ಬಾಲ್ ಆಟಗಾರರಾಗಿದ್ದ ಅವರು ಕಿಯೋಂಜಾರ್ನ ರೈಕಾಲಾ ರೈಸಿಂಗ್ ಸ್ಟಾರ್ ಕ್ಲಬ್ ಅನ್ನು ಪ್ರತಿನಿಧಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ
1997- 2000ರಲ್ಲಿ ಸರಪಂಚ್ ಆದ ನಂತರ ರಾಜ್ಯ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದ ಅವರು ಬಿಜೆಪಿ ರಾಜ್ಯ ಅಡ್ವಾಸಿ ಮೋರ್ಚಾ ಕಾರ್ಯದರ್ಶಿಯೂ ಆಗಿದ್ದರು. ಅವರು ಪಕ್ಷದ ಬುಡಕಟ್ಟು ಮುಖವಾಗಿದ್ದಾರೆ ಮತ್ತು ಒಡಿಶಾದಲ್ಲಿ ಬಿಜೆಪಿ ಎಸ್ಸಿ/ಎಸ್ಟಿ ವಿಭಾಗವನ್ನು ಮುನ್ನಡೆಸಿದ್ದಾರೆ. ಅವರು ಕಿಯೋಂಜರ್ನ ರೈಕಾಲಾದ ನಿವಾಸಿಯಾಗಿದ್ದಾರೆ.
ಕನಕ ವರ್ಧನ್ ಸಿಂಗ್ ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಉಪ ಮುಖ್ಯಮಂತ್ರಿಗಳಾಗಿ ಘೋಷಿಸಲಾಗಿದೆ.
ಇಂದು ಪ್ರಮಾಣವಚನ ಕಾರ್ಯಕ್ರಮ ಜರುಗಲಿದೆ.
#WATCH | Mohan Charan Majhi elected as the Leader of BJP Legislative Party in Odisha. He will be the new CM of the state. pic.twitter.com/tDMART1zN7
— ANI (@ANI) June 11, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.