ನವದೆಹಲಿ: ಇಂದು ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ಎನ್ಡಿಎ ನಾಯಕರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನೂತನವಾಗಿ ಅಯ್ಕೆಯಾಗುವ ಸಚಿವರಿಗೆ ಸಲಹೆಗಳನ್ನು ನೀಡಿದ್ದಾರೆ. ಸರ್ಕಾರದ ಮೇಲೆ ಕೇಂದ್ರೀಕರಿಸಿ ಮತ್ತು ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಸಂಪುಟ ರಚನೆಗೆ ಮುನ್ನ 2014 ರಿಂದ ಪ್ರಧಾನಿ ಮೋದಿಯವರು ರೂಢಿಸಿಕೊಂಡು ಬಂದಂತೆ ಈ ಸಭೆಯು ನಡೆದಿದ್ದು, ಹೊಸ ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಲು ತಯಾರಿ ನಡೆಸುತ್ತಿರುವಾಗ ಅವರ ಜವಾಬ್ದಾರಿಗಳು ಮತ್ತು ನಿರೀಕ್ಷೆಗಳಿಗೆ ಇದು ಪೂರಕವಾಗಿದೆ
ಮನೋಹರ್ ಲಾಲ್ ಖಟ್ಟರ್, ಶಿವರಾಜ್ ಸಿಂಗ್ ಚೌಹಾಣ್, ಬಂಡಿ ಸಂಜಯ್ ಕುಮಾರ್ ಮತ್ತು ರವನೀತ್ ಸಿಂಗ್ ಬಿಟ್ಟು ಸೇರಿದಂತೆ ಹಲವಾರು ಹೊಸ ಮುಖಗಳು ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ನಿರೀಕ್ಷೆಯಿದೆ. ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್, ಅಶ್ವಿನಿ ವೈಷ್ಣವ್, ನಿರ್ಮಲಾ ಸೀತಾರಾಮನ್ ಮತ್ತು ಮನ್ಸುಖ್ ಮಾಂಡವಿಯಾ ಅವರಂತಹ ಹಿರಿಯ ನಾಯಕರೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಶಿವಸೇನೆಯ ಪ್ರತಾಪ್ರಾವ್ ಜಾಧವ್, ಬಿಜೆಪಿಯ ಸಿಆರ್ ಪಾಟೀಲ್, ಜ್ಯೋತಿರಾದಿತ್ಯ ಸಿಂಧಿಯಾ, ರಾವ್ ಇಂದರ್ಜಿತ್ ಸಿಂಗ್, ನಿತ್ಯಾನಂದ ರೈ, ಭಾಗೀರಥ್ ಚೌಧರಿ ಮತ್ತು ಹರ್ಷ್ ಮಲ್ಹೋತ್ರಾ ಕೂಡ ಸೇರ್ಪಡೆಗೊಳ್ಳಬಹುದು.
ಬಿಜೆಪಿಯಿಂದ ಜಿತಿನ್ ಪ್ರಸಾದ ಮತ್ತು ರಕ್ಷಾ ಖಡ್ಸೆ ಕೂಡ ಹೊಸ ಸರ್ಕಾರಕ್ಕೆ ಸೇರುವ ನಿರೀಕ್ಷೆಯಿದೆ. ನಿರ್ಮಲಾ ಸೀತಾರಾಮನ್, ಸರ್ಬಾನಂದ ಸೋನೋವಾಲ್ ಮತ್ತು ಕಿರಣ್ ರಿಜಿಜು ಕೂಡ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಮಿತ್ರಪಕ್ಷಗಳಾದ ಟಿಡಿಪಿಯ ರಾಮ್ ಮೋಹನ್ ನಾಯ್ಡು ಮತ್ತು ಜೆಡಿಯುನ ಲಲನ್ ಸಿಂಗ್ ಅವರನ್ನೂ ಸಚಿವ ಸ್ಥಾನಕ್ಕೆ ಪರಿಗಣಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.