ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದಾದ್ಯಂತ ಎರಡು ತಿಂಗಳ ಸುದೀರ್ಘ ಲೋಕಸಭಾ ಚುನಾವಣಾ ಪ್ರಚಾರವನ್ನು ಪೂರ್ಣಗೊಳಿಸಿ ಗುರುವಾರ ಸಂಜೆ ತಮಿಳುನಾಡಿನ ಪ್ರಸಿದ್ಧ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ ತಮ್ಮ 45 ಗಂಟೆಗಳ ಸುದೀರ್ಘ ಧ್ಯಾನವನ್ನು ಪ್ರಾರಂಭಿಸಿದರು.
ಸಮೀಪದ ತಿರುವನಂತಪುರದಿಂದ ಹೆಲಿಕಾಪ್ಟರ್ನಲ್ಲಿ ಆಗಮಿಸಿದ ಮೋದಿ ನಂತರ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು ಮತ್ತು ದೋಣಿ ಸೇವೆಯ ಮೂಲಕ ರಾಕ್ ಸ್ಮಾರಕವನ್ನು ತಲುಪಿ ಧ್ಯಾನವನ್ನು ಪ್ರಾರಂಭಿಸಿದರು.
ಧೋತಿ ಮತ್ತು ಬಿಳಿ ಶಾಲು ಧರಿಸಿದ ಮೋದಿ ಅವರು ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ‘ಗರ್ಭಗೃಹ’ ಪ್ರದಕ್ಷಿಣೆ ಮಾಡಿದರು. ಅರ್ಚಕರು ವಿಶೇಷ ‘ಅರತಿ’ಯನ್ನು ಬೆಳಗಿ ಶಾಲು ಮತ್ತು ದೇವರ ಫೋಟೋ ಇರುವ ದೇವಾಲಯದ ‘ಪ್ರಸಾದ’ವನ್ನು ಮೋದಿಗೆ ನೀಡಿದರು.
ನಂತರ, ಅವರು ರಾಜ್ಯ ಸರ್ಕಾರ ನಡೆಸುತ್ತಿರುವ ಶಿಪ್ಪಿಂಗ್ ಕಾರ್ಪೊರೇಷನ್ ನಿರ್ವಹಿಸುವ ದೋಣಿ ಸೇವೆಯ ಮೂಲಕ ರಾಕ್ ಸ್ಮಾರಕವನ್ನು ತಲುಪಿ ‘ಧ್ಯಾನ್ ಮಂಟಪ’ದಲ್ಲಿ ಧ್ಯಾನವನ್ನು ಪ್ರಾರಂಭಿಸಿದರು. ಅವರು ಧ್ಯಾನ ಪ್ರಾರಂಭಿಸುವ ಮೊದಲು ಸ್ವಲ್ಪ ಹೊತ್ತು, ಸ್ಮಾರಕವನ್ನು ಸುತ್ತುವರೆದಿರುವ ಸಮುದ್ರದ ರುದ್ರರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಂಡರು.
ರಾಮಕೃಷ್ಣ ಪರಮಹಂಸ, ಮಾತೆ ಶ್ರೀ ಶಾರದಾದೇವಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಪ್ರಧಾನಮಂತ್ರಿಯವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ನಮಿಸಿ ಮಂಟಪದಲ್ಲಿ ಧ್ಯಾನ ಆರಂಭಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.