ಬೈಂದೂರು: ಮಳೆಗಾಲದಲ್ಲಿ ಜನರಿಗೆ ನೆರವಾಗಲಿ ಎಂಬ ಸದುದ್ದೇಶದೊಂದಿಗೆ ಶಾಸಕ ಗುರುರಾಜ ಗಂಟಿಹೊಳೆ ಅವರ ಪರಿಕಲ್ಪನೆಯಂತೆ ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಲುಸಂಕ ನಿರ್ಮಾಣ ಯೋಜನೆ ಅನುಷ್ಠಾನಗೊಂಡಿದೆ. ಆರಂಭದಲ್ಲಿ ಮೂರು ಕಡೆಗಳಲ್ಲಿ ಪ್ರಾಯೋಗಿಕವಾಗಿ ಕಾಲು ಸಂಕ ನಿರ್ಮಾಣವಾಗುತ್ತಿದ್ದು, ನಂತರ ಮುಂದಿನ ಕಾಲು ಸಂಕಗಳು ನಿರ್ಮಾಣವಾಗಲಿದೆ.
ಸಮೃದ್ಧ ಬೈಂದೂರು ಟ್ರಸ್ಟ್ ಮತ್ತು ಬೆಂಗಳೂರಿನ ಅರುಣಾಚಲಂ ಟ್ರಸ್ಟ್ ಸಹಯೋಗದಲ್ಲಿ ಲಾರಿ, ಬಸ್ಸಿನ ಹಳೆಯ ಚಾಸಿಸ್ ಗಳನ್ನು ಪ್ರಮುಖವಾಗಿ ಬಳಿಸಿಕೊಂಡು ಕಾಲುಸಂಕ ನಿರ್ಮಾಣವಾಗುತ್ತಿದೆ. ಹೊಸಂಗಡಿ ಸಮೀಪದ ಯಡಮೊಗೆಯ ರಾಂಪೈಜೆಡ್ಡು ಎಂಬಲ್ಲಿ ಮೊದಲ ಕಾಲುಸಂಕ ನಿರ್ಮಾಣವಾಗುತ್ತಿದೆ. ರಾಂಪೈಜೆಡ್ಡು – ಯಡಮೊಗೆ ಕುಮ್ಟೆಬೇರು ನಡುವೆ ಸಂಚರಿಸಬೇಕಾದರ ನಡುವೆ ಹೊಳೆ ಅಡ್ಡ ಬರುತ್ತದೆ. ಹೀಗಾಗಿ ಕಾಲು ಸಂಕ ನಿರ್ಮಾಣ ಅತ್ಯಗತ್ಯವಾಗಿದೆ. ಮರದ ದಿಮ್ಮಿ ಬಳಸಿ ಮಾಡಿದ ಕಾಲು ಸಂಕ ಇಲ್ಲಿ ಇತ್ತು. ಆದರೆ ಇದು ಅಪಾಯಕಾರಿಯಾಗಿತ್ತು. ಇದೀಗ ಶಾಸಕರ ಪರಿಶ್ರಮದ ಫಲವಾಗಿ ಅಲ್ಲಿ ಆಧುನಿಕ ಕಾಲು ಸಂಕ ನಿರ್ಮಾಣವಾಗುತ್ತಿದೆ.
ಚಾಸಿಸ್ ಬಳಿಸಿ ನಿರ್ಮಿಸುವ ಅಪರೂಪದ ಕಾಲುಸಂಕ ಉಡುಪಿ ಜಿಲ್ಲೆಗೆ ಮಾತ್ರವಲ್ಲೇ ಇಡೀ ರಾಜ್ಯಕ್ಕೆಯೇ ಪ್ರಥಮ ಎನ್ನಲಾಗಿದೆ.
ಹಳೆಯ ಲಾರಿ, ಬಸ್ ಇತ್ಯಾದಿ ವಾಹನಗಳ ಚಸ್ಸಿ ಸಹಿತ ವಿವಿಧ ಪರಿಕರಗಳನ್ನು ಬಳಸಿ ಕಾಲು ಸಂಕ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 60 ರಿಂದ 72 ಅಡಿ ಎಷ್ಟು ಉದ್ದದ ಕಾಲು ಸಂಕ ನಿರ್ಮಿಸಲಾಗುತ್ತಿದೆ ಒಂದು ಕಾಲು ಸಂಕ 36 ಅಡಿ ಇರುತ್ತದೆ. ಎರಡು ಕಾಲು ಸಂಕ ಜೋಡಿಸಿ 72 ಅಡಿ ಉದ್ದದ ಕಾಲು ಸಂಕ ನಿರ್ಮಾಣವಾಗುತ್ತಿದೆ.
ಅರುಣಾಚಲಂ ಟ್ರಸ್ಟ್ ನಿಂದ ಹಂತ ಹಂತವಾಗಿ ಸುಮಾರು 50 ಕಾಲು ಸಂಕ ನಿರ್ಮಾಣದ ಭರವಸೆ ನೀಡಲಾಗಿದೆ. ಮುಂಬರುವ ಮಳೆಗಾಲದೊಳಗೆ ಮೂರು ಕಾಲು ಸಂಕಗಳು ಸಿದ್ಧವಾಗಲಿದೆ . ಕ್ಷೇತ್ರದ ಜನತೆಗೆ ಕಾಲು ಸಂಕ ಇಲ್ಲದೆ ಸಮಸ್ಯೆ ಆಗಬಾರದು ಎಂಬ ಸದುದ್ದೇಶದಿಂದ ಅರುಣಾಚಲಂ ಟ್ರಸ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡು ತುರ್ತು ಅಗತ್ಯವಿರುವ ಕೆಲವೆಡೆ ಕಾಲು ಸಂಕ ನಿರ್ಮಾಣ ಮಾಡುತ್ತಿದ್ದೇವೆ. ನವೀನ ಆವಿಷ್ಕಾರದ ಮೂಲಕ ಕಾಲುಸಂಕ ನಿರ್ಮಾಣವಾಗುತ್ತಿದೆ ಎಂದು ಈ ಹಿಂದೆ ಶಾಸಕರು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.