News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಫ್ರಿಕಾ ಪ್ರವೇಶಿಸಲು ಸಿದ್ಧವಾಗಿದೆ ಮುಖೇಶ್‌ ಅಂಬಾನಿ ಅವರ ಟೆಲಿಕಾಂ ಉದ್ಯಮ

ನವದೆಹಲಿ: ಮೊಬೈಲ್ ಬ್ರಾಡ್‌ಬ್ಯಾಂಡ್ ಗ್ರಾಹಕರ ಮೇಲೆ ಕೇಂದ್ರೀಕರಿಸಲು ಬಯಸುತ್ತಿರುವ ಮುಖೇಶ್‌ ಅಂಬಾನಿ ಅವರ ಟೆಲಿಕಾಂ ಉದ್ಯಮವು ಶೀಘ್ರದಲ್ಲೇ ಆಫ್ರಿಕಾವನ್ನು ಪ್ರವೇಶಿಸಲು ಸಿದ್ಧವಾಗಿದೆ.

ಅಂಬಾನಿ-ನಿಯಂತ್ರಿತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್- ರಾಡಿಸಿಸ್ ಕಾರ್ಪೊರೇಷನ್- ಘಟಕವು ಘಾನಾ ಮೂಲದ ನೆಕ್ಸ್ಟ್-ಜೆನ್ ಇನ್ಫ್ರಾಕೋ (NGIC)ಗೆ ಪ್ರಮುಖ ನೆಟ್‌ವರ್ಕ್ ಮೂಲಸೌಕರ್ಯ, ಅಪ್ಲಿಕೇಶನ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಒದಗಿಸುತ್ತದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಎನ್‌ಜಿಐಸಿಯ ಕಾರ್ಯನಿರ್ವಾಹಕ ನಿರ್ದೇಶಕ ಹರ್ಕಿರಿತ್ ಸಿಂಗ್ ಅವರನ್ನು ಉಲ್ಲೇಖಿಸಿ, ಈ ವರ್ಷದ ಅಂತ್ಯದ ವೇಳೆಗೆ ಕಂಪನಿಯು ಕಾರ್ಯಾಚರಣೆಯನ್ನು ಪ್ರಾರಂಭಿಸುವುದರಿಂದ ಶೀಘ್ರದಲ್ಲೇ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

NGIC ಘಾನಾದಲ್ಲಿ ಮೊಬೈಲ್ ಆಪರೇಟರ್‌ಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರಿಗೆ 5G ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುತ್ತದೆ, ಕಂಪನಿಯು ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಕೈಗೆಟುಕುವ ಡಿಜಿಟಲ್ ಸೇವೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ವರದಿಯ ಪ್ರಕಾರ NGIC ನಲ್ಲಿ Nokia Oyj, ಟೆಕ್‌ ಮಹೀಂದ್ರಾ ಲಿಮಿಟೆಡ್ ಮತ್ತು‌ ಮೈಕ್ರೋಸಾಫ್ಟ್‌ ಕಾರ್ಪ್‌ ಪಾಲುದಾರರು. ಘಾನಾ ಮೂರು ಪ್ರಮುಖ ಆಪರೇಟರ್‌ಗಳನ್ನು ಹೊಂದಿದೆ ಅದೆಂದರೆ MTN ಘಾನಾ, ವೊಡಾಫೋನ್ ಘಾನಾ ಮತ್ತು ಸರ್ಕಾರಿ ಏರ್‌ಟೆಲ್ ಟಿಗೊ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top