ಅಹಮದಾಬಾದ್: ಅದಾನಿ ಪೋರ್ಟ್ಸ್ ಆಂಡ್ ಸ್ಪೆಷಲ್ ಎಕನಾಮಿಕ್ ಝೋನ್ ಲಿಮಿಟೆಡ್ (APSEZ) ನ ಪ್ರಮುಖ ಮುಂದ್ರಾ ಬಂದರು ಅತಿದೊಡ್ಡ ಕಂಟೈನರ್ ಹಡಗನ್ನು ಸ್ವಾಗತಿಸುವ ಮೂಲಕ ಮತ್ತೊಂದು ದಾಖಲೆಯನ್ನು ಸೃಷ್ಟಿಸಿದೆ ಎಂದು ಕಂಪನಿಯು ಇಂದು ಪ್ರಕಟಿಸಿದೆ.
ಇದು ಭಾರತದ ಬಂದರಿಗೆ ಆಗಮಿಸಿದ ಇದುವರೆಗಿನ ಅತಿದೊಡ್ಡ ಕಂಟೈನರ್ ಹಡಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದ್ರಾ ಬಂದರಿನಲ್ಲಿ ಡಾಕ್ ಮಾಡಲಾದ MSC ಅಣ್ಣಾ ಹಡಗು 399.98 ಮೀಟರ್ ಉದ್ದವನ್ನು ಹೊಂದಿದೆ – ಸರಿಸುಮಾರು ನಾಲ್ಕು ಫುಟ್ಬಾಲ್ ಮೈದಾನಗಳ ಉದ್ದ ಇದಾಗಿದೆ ಮತ್ತು 19,200 TEU ಗಳನ್ನು (20-ಅಡಿ ಸಮಾನ ಘಟಕಗಳು) ಸಾಗಿಸುವ ಸಾಮರ್ಥ್ಯವನ್ನು ಹೊಂದಿರುವ ಅತಿದೊಡ್ಡ ಕಂಟೇನರ್ ಹಡಗುಗಳಲ್ಲಿ ಒಂದಾಗಿದೆ.
“ಮುಂದ್ರಾದಲ್ಲಿ MSC ಅಣ್ಣಾ ಆಗಮನವು ಮೆಗಾ ಹಡಗುಗಳನ್ನು ನಿರ್ವಹಿಸುವ ಬಂದರಿನ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಮಾತ್ರವಲ್ಲದೆ ಭಾರತದ ಕಡಲ ವ್ಯಾಪಾರದ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅದರ ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸುತ್ತದೆ” ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.